ಸಿಡಿಲು ಬಡಿತಕ್ಕೆ ಯುವಕರಿಬ್ಬರು ಬಲಿ!
Thursday, April 14, 2022
ಚನ್ನರಾಯಪಟ್ಟಣ: ಸಿಡಿಲು ಬಡಿತಕ್ಕೆ ಯುವಕರಿಬ್ಬರು ಬಲಿಯಾದ ಘಟನೆ ಚೆನ್ನರಾಯಪಟ್ಟಣ ತಾಲೂಕಿನ ಬಸವನಪುರ ಗ್ರಾಮದ ಬಳಿ ಸಂಭವಿಸಿದೆ.
ಬಸವನಪುರ ಗ್ರಾಮ ನಿವಾಸಿ ಉದಯ್ ಕುಮಾರ್(24) ಹಾಗೂ ಸೂಸಲಗೆರೆ ಗ್ರಾಮ ನಿವಾಸಿ ದರ್ಶನ್(19) ಮೃತಪಟ್ಟ ಯುವಕರು.
ನಿನ್ನೆ ಭಾರೀ ಗುಡುಗು ಸಹಿತ ಗಾಳಿ ಮಳೆ ಸುರಿದಿತ್ತು. ಈ ಹಿನ್ನೆಲೆಯಲ್ಲಿ ಉದಯ್ ಕುಮಾರ್ ಹಾಗೂ ದರ್ಶಬ್ ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಹೋಬಳಿಯ ಬಸವನಪುರ ಗೇಟ್ ಬಳಿ ಬಸ್ ತಂಗುದಾಣವೊಂದರಲ್ಲಿ ನಿಂತಿದ್ದರು. ಆಗ ಏಕಾಏಕಿ ಇವರು ನಿಂತಿದ್ದ ಸ್ಥಳಕ್ಕೆ ಸಿಡಿಲು ಬಡಿದಿದೆ. ಪರಿಣಾಮ ಯುವಕರಿಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.