-->
ಎಲಾನ್ ಮಸ್ಕ್: ನಷ್ಟದಿಂದ ನೆಲ ಕಚ್ಚಿದ್ದ ಮೇಲೆದ್ದ ವಿಶ್ವದ ಟಾಪ್ ಶ್ರೀಮಂತ!- ಈ ಫೀನಿಕ್ಸ್ ಹಕ್ಕಿಯ ಕಥೆಯೇ ರೋಚಕ

ಎಲಾನ್ ಮಸ್ಕ್: ನಷ್ಟದಿಂದ ನೆಲ ಕಚ್ಚಿದ್ದ ಮೇಲೆದ್ದ ವಿಶ್ವದ ಟಾಪ್ ಶ್ರೀಮಂತ!- ಈ ಫೀನಿಕ್ಸ್ ಹಕ್ಕಿಯ ಕಥೆಯೇ ರೋಚಕ

ಎಲಾನ್ ಮಸ್ಕ್: ನಷ್ಟದಿಂದ ನೆಲ ಕಚ್ಚಿದ್ದ ಮೇಲೆದ್ದ ವಿಶ್ವದ ಟಾಪ್ ಶ್ರೀಮಂತ!- ಈ ಫೀನಿಕ್ಸ್ ಹಕ್ಕಿಯ ಕಥೆಯೇ ರೋಚಕ





ಎಲಾನ್ ಮಸ್ಕ್... ಈ ಹೆಸರೇ ಈಗ ಉದ್ಯಮ ವಲಯದಲ್ಲಿ ಬಲು ರೋಚಕ. ಐಷಾರಾಮಿ ಆಟಿಕೆ ಸಾಮಾನು ಖರೀದಿಸಿದಂತೆ 3.36 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್ ಈಗ ವಿಶ್ವದ ನಂಬರ್ ಒನ್ ಶ್ರೀಮಂತ.



ಈ ಎವರೆಸ್ಟ್ ಏರಲು ಆತ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಉನ್ನತ ಶೃಂಗ ಏರುವ ಮುನ್ನ ಆತ ತೀವ್ರ ನಷ್ಟಕ್ಕೀಡಾಗಿದ್ದ. ಮತ್ತೆ ಯಶಸ್ವಿ ಉದ್ಯಮಿಯಾದದ್ದು ಒಂದು ರೋಚಕ ಕಥೆ. ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದ ಬಗೆ ಹೇಗೆ ಗೊತ್ತೇ..?





ಉದ್ಯಮ ವಲಯದ ನವತಾರೆ ಎಲಾನ್ ಮಸ್ಕ್ ಜನಿಸಿದ್ದು 1971ರಲ್ಲಿ . ತಂದೆ ದಕ್ಷಿಣ ಆಫ್ರಿಕಾದ ಎರಾಲ್ ಮಸ್ಕ್, ತಾಯಿ ಕೆನಡಾ ಮೂಲದ ಮಾಯೆ ಮಸ್ಕ್. ಬಾಲ್ಯದಿಂದಲೇ ಎಲಾನ್ ಮಸ್ಕ್ ಗೆ ಬಾಹ್ಯಕಾಶದ ಬಗ್ಗೆ ಅಪಾರ ಒಲವು. ಆತ ದಿನಕ್ಕೆ ಕನಿಷ್ಟ 13 ತಾಸು ಓದುತ್ತಿದ್ದ.



ಎಲಾನ್ ಮಸ್ಕ್ ಅವರ ಪ್ರಾಥಮಿಕ ಹಾಗೂ ಫ್ರೌಡ ಶಿಕ್ಷಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆಯಿತು. ಆ ದೇಶದ ನಿಯಮದಂತೆ ಉನ್ನತ ಶಿಕ್ಷಣ ಪಡೆಯಬೇಕೆಂದರೆ ಆಫ್ರಿಕಾದಲ್ಲಿ 2 ವರ್ಷ ಸೇನೆಯಲ್ಲಿ ಸೇವೆ ಮಾಡಬೇಕಿತ್ತು. ಹಾಗಾಗಿ, ತಾಯಿಯ ಸಹಾಯದಿಂದ ಎಲಾನ್ ಮಸ್ಕ್ ಆಫ್ರಿಕಾ ಬಿಟ್ಟು ಕೆನಡಾಗೆ ವಲಸೆ ಬಂದರು.



ಅಲ್ಲಿ ಬಂದು, ಕ್ವೀನ್ಸ್ ಯೂನಿವರ್ಸಿಟಿ ಹಾಗೂ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಲ್ಲಿ ವಾಣಿಜ್ಯ ಮತ್ತು ಭೌತಶಾಸ್ತ್ರದ ಡ್ರಿಗ್ರಿ ಪಡೆದರು. ಆ ಬಳಿಕ, Phd ಸಾಧನೆಗೆ ಸ್ಟಾನ್ ಫರ್ಡ್ ವಿಶ್ವವಿದ್ಯಾನಿಲಯ ಸೇರಿದರು. ಇಂಟರ್‌ನೆಟ್ ಬೂಮ್ ಬಗ್ಗೆ ಅರಿತುಕೊಂಡ ಎಲಾನ್ ಮಸ್ಕ್ ತಮ್ಮ Phd ಪ್ರಯತ್ನಕ್ಕೆ ಇತಿಶ್ರೀ ಹಾಡಿ ಉದ್ಯಮಿ ಆಗುವತ್ತ ಪಯಣ ಅರಂಭಿಸಿದರು.



1995ರಲ್ಲಿ ಎಲಾನ್ ಮಸ್ಕ್ 'ಝೀಪ್ 2' ಎಂಬ ಕಂಪನಿ ಆರಂಭಿಸಿದರು. ಅದು ಗೂಗಲ್ ಮ್ಯಾಪ್‌ನಂತೆ ಲೊಕೇಶನ್ ಹುಡುಕಲು ಹೆಲ್ಪ್ ಮಾಡುವ ಸಿಸ್ಟಂ. ಅದನ್ನು ಯಶಸ್ವೀಯಾಗಿ ಮುನ್ನಡೆಸಿ 'ಕಾಂಪಾಕ್' ಎಂಬ ಕಂಪನಿಗೆ 22 ಮಿಲಿಯನ್ ಡಾಲರ್ ಗೆ 'ಝೀಪ್ 2'ನ್ನು ಮಾರಾಟ ಮಾಡಿದರು.



ಆ ಪಯಣ ಅಷ್ಟಕ್ಕೇ ನಿಲ್ಲಲಿಲ್ಲ. 1999ರಲ್ಲಿ 10 ಮಿಲಿಯನ್ ಡಾಲರ್ ಹೂಡಿಕೆ ಮಾಡಿ 'ಎಕ್ಸ್ ಕಾಂ' ಎಂಬ Online ಫೈನಾನ್ಮಿಯಲ್ ಸರ್ವಿಸ್ ಕಂಪನಿ ಆರಂಭಿಸಿದರು. ಅದೂ ಯಶಸ್ವಿಯಾಯಿತು. ತಮ್ಮ ಎರಡನೇ ಕಂಪೆನಿಯನ್ನು 'Eebay' ಕಂಪನಿಗೆ ಸೇಲ್ ಮಾಡಿದರು. ಆಗ ಅವರು ಗಳಿಸಿದ್ದು 165 ಮಿಲಿಯನ್ ಡಾಲರ್.



ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಎಲಾನ್ ಮಸ್ಕ್‌, ಸ್ಪೇಸ್ ಎಕ್ಸ್ ಎಂಬ ಕಂಪನಿ ಆರಂಭಿಸಿ ಬಾಹ್ಯಾಕಾಶ ನೌಕೆ ತಯಾರಿ ಆರಂಭಿಸಿದರು. ಬರೋಬ್ಬರಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿ ಸ್ಪೇಸ್ ಶಿಪ್ ಸೃಷ್ಟಿಸಿದರು. ಆದರೆ ಅದು ಬಾಹ್ಯಕಾಶ ನೌಕೆಗಳನ್ನು ಕಕ್ಷೆಗೆ ಸೇರಿಸವಲ್ಲಿ ಫೇಲ್ ಆಯಿತು. ಕಕ್ಷೆಗೆ ಸೇರಬೇಕಾದ ರಾಕೆಟ್ ಸುಟ್ಟು ಭಸ್ಮವಾಯಿತು. ಇದರಿಂದ ಮಸ್ಕ್ ಭಾರೀ ನಷ್ಟ ಅನುಭವಿಸಿದರು.



ಅಮೇರಿಕಾದ ನಾಸಾ ಈ ಸಂದರ್ಭದಲ್ಲಿ ಎಲಾನ್ ಮಸ್ಕ್ ಬೆಂಬಲಕ್ಕೆ ನಿಂತಿತು. 1.5 ಬಿಲಿಯನ್ ಪ್ರಾಜೆಕ್ಟ್ ನ್ನು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪೆನಿಗೆ ನೀಡಿತು. ಸೋಲಿನ ಪ್ರಪಾತದಿಂದ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದರು ಎಲಾನ್ ಮಸ್ಕ್‌.



ಆ ಬಳಿಕ, 2004ರಲ್ಲಿ Electric Car ನಿರ್ಮಿಸುವ 'ಸೋಲಾರ್ ಸಿಟಿ' ಕಂಪನಿ ಆರಂಭಿಸಿ ಅದಕ್ಕೆ 'Tesla' ಎಂದು ಹೆಸರಿಟ್ಟರು. ಅದರ ಜೊತೆಗೆ 2013ರಲ್ಲಿ ಹೈಪರ್ ಲೂಪ್ ಎಂಬ ಟ್ರಾಫಿಕ್ ಫ್ರೀ Highspeed Transportation System ಎಂಬ ಸುರಂಗ ಮಾರ್ಗ ಸಿದ್ದಪಡಿಸುವ ಕಂಪನಿ ಆರಂಭಿಸಿದರು.



ಇದೆಲ್ಲ ಎಲಾನ್ ಮಸ್ಕ್ ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯನ್ನಾಗಿ ಮಾಡಿತು. ಉದ್ಯಮ ರಂಗದ ಧ್ರುವತಾರೆಯಂತೆ ಬೆಳಗುತ್ತಿರುವ ಎಲಾನ್ ಮಸ್ಕ್ ಅವರ ಈ ಹಾದಿಯೇ ಒಂದು ರೋಚಕ ಕಥೆ. ಟ್ವಿಟ್ಟರ್ ಖರೀದಿ ಬಳಿಕ ಕೋಕಾಕೋಲಾ ಕಂಪೆನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article