ಪ್ರೀತಿಸಿ ವಿವಾಹ ಮಾಡಿಕೊಂಡ ಯುವಕನ ಮನೆಗೆ ಬೆಂಕಿಯಿಕ್ಕಿ ಧ್ವಂಸ!
Tuesday, April 26, 2022
ಕೋಲಾರ: ಯುವತಿಯೋರ್ವಳನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿರುವ ಯುವಕನ ಮನೆಗೆ ಬೆಂಕಿಯಿಕ್ಕಿ ಧ್ವಂಸ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ವೇಮಗಲ್ ತಾಲೂಕಿನಲ್ಲಿ ನಡೆದಿದೆ.
ವೇಮಗಲ್ ಗ್ರಾಮದ ನಿವಾಸಿ ಮುನಿರಾಜು ಎಂಬಾತ ಸಿಂಧೂ ಎಂಬ ಯುವತಿಯನ್ನು ವಿವಾಹ ಮಾಡಿಕೊಂಡಿದ್ದ. ಇಬ್ಬರೂ ಹಲವಾರು ವರ್ಷಗಳಿಂದ ಪ್ರೀತಿಯ ಬಲೆಗೆ ಬಿದ್ದಿದ್ದು, ಇದೀಗ ಮದುವೆಯಾಗಿದ್ದಾರೆ. ಆದರೆ ಇವರಿಬ್ಬರ ಮದುವೆಯನ್ನು ಸಿಂಧೂ ಮನೆಯವರು ವಿರೋಧಿಸಿದ್ದರು.
ಮನೆಯವರ ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ ಮುನಿರಾಜು ಹಾಗೂ ಸಿಂಧೂ ಮದುವೆಯಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮುನಿರಾಜು ಮನೆಯನ್ನು ಧ್ವಂಸ ಮಾಡಿ ಮನೆಯಲ್ಲಿದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ.
ಈ ಬಗ್ಗೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.