-->
ಪ್ರಥಮ ರಾತ್ರಿಯಂದು ತನ್ನ ಮೇಲಿನ ಅತ್ಯಾಚಾರದ ವಿಚಾರವನ್ನು ಬಿಚ್ಚಿಟ್ಟ ವಧು: ವರ ಮಾಡಿದ್ದೇನು ಗೊತ್ತೇ?

ಪ್ರಥಮ ರಾತ್ರಿಯಂದು ತನ್ನ ಮೇಲಿನ ಅತ್ಯಾಚಾರದ ವಿಚಾರವನ್ನು ಬಿಚ್ಚಿಟ್ಟ ವಧು: ವರ ಮಾಡಿದ್ದೇನು ಗೊತ್ತೇ?

ಗ್ವಾಲಿಯಾರ್​(ಮಧ್ಯಪ್ರದೇಶ): ನೂರಾರು ಕನಸುಗಳನ್ನು ಹೊತ್ತುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಯುವತಿ ಮೊದಲ ರಾತ್ರಿಯಂದೇ ಪತಿಯ ಮುಂದೆ ತನ್ನ ಜೀವನದ ಕಹಿ ಸತ್ಯವೊಂದನ್ನು ಬಿಚ್ಚಿಟ್ಟಿದ್ದ ಪರಿಣಾಮ ಅದೇ ರಾತ್ರಿ ಅವರಿಬ್ಬರೂ ಬೇರ್ಪಟ್ಟ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಈ ನಡೆದಿದೆ. 

ಈ ಘಟನೆ 2019ರಲ್ಲಿ ನಡೆದಿದ್ದರೂ, ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಬಂಧು-ಮಿತ್ರರು ಸೇರಿದಂತೆ ಅಪಾರ ಜನಸ್ತೋಮದ ಮುಂದೆ ನವಜೋಡಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮೊದಲ ರಾತ್ರಿಯಂದು ಇಬ್ಬರೂ ತಮ್ಮ ಜೀವನದಲ್ಲಿ ನಡೆದಿರುವ ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಬಗ್ಗೆ ಪರಸ್ಪರ ಮಾತನಾಡಿದ್ದಾರೆ. ಈ ವೇಳೆ ವಧು ಹೇಳಿರುವ ಕಹಿ ಸತ್ಯವೊಂದು ಇಬ್ಬರನ್ನೂ ದೂರ ಮಾಡಿದೆ. ಅಲ್ಲದೆ, ಇವರಿಬ್ಬರ ದಾಂಪತ್ಯ ಜೀವನವನ್ನೇ ಅಂತ್ಯಗೊಳಿಸಿದೆ.

ವಿವಾಹಕ್ಕೂ ಮೊದಲು ತನ್ನ ಮೇಲೆ ನಡೆದಿರುವ ಅತ್ಯಾಚಾರದ ವಿಚಾರವನ್ನು ಮೊದಲ ರಾತ್ರಿಯಂದು ವಧು ಪತಿಗೆ ತಿಳಿಸಿದ್ದಾಳೆ. ತನ್ನ ಸಂಬಂಧಿಯಿಂದಲೇ ಈ ದುಷ್ಕೃತ್ಯಕ್ಕೊಳಗಾಗಿರುವ ವಿಚಾರವನ್ನು ಆಕೆ ವಿವರಿಸಿದ್ದಾಳೆ. ಈ ಮಾತು ಕೇಳಿ ದಿಢೀರ್ ಶಾಕ್​ಗೊಳಗಾಗಿರುವ ಪತಿ, ಈ ಬಗ್ಗೆ ತನ್ನ ಕುಟುಂಬಸ್ಥರೊಂದಿಗೆ ಹೇಳಿದ್ದಾನೆ. ಇಷ್ಟೇ ಅಲ್ಲದೆ, ಪತಿ ಆಕೆಯಿಂದ ವಿಚ್ಛೇದನ ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದಾನೆ.

Ads on article

Advertise in articles 1

advertising articles 2

Advertise under the article