ಬಳ್ಳಾರಿ ಸಬ್ ರಿಜಿಸ್ಟ್ರಾರ್ ಮೇಲೆ ವಂಚನೆ ಆರೋಪ: ಮೊದಲ ಪತ್ನಿಯಿದ್ದಾಗಲೇ ಮಾಡೆಲ್ ನನ್ನು ಮದುವೆಯಾಗಿ ಮಗು ಕರುಣಿಸಿರುವ ಕಾಮಪುರಾಣ ಬಯಲು!
Wednesday, April 6, 2022
ಬಳ್ಳಾರಿ: ಮೊದಲನೇ ಪತ್ನಿ ಇದ್ದಾಗಲೇ ಮತ್ತೊಂದು ಮದುವೆಯಾಗಿ ವಂಚನೆ ಮಾಡಿದ್ದಾನೆಂದು ಬಳ್ಳಾರಿಯ ಸಬ್ ರಿಜಿಸ್ಟ್ರಾರ್ ಉಮೇಶ್ ವಿರುದ್ಧ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂತ್ರಸ್ತೆ ನಜ್ಮೀನ್ ಖಾನ್ ಗಂಭೀರ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಂಚನೆಗೊಳಗಾದ ಸಂತ್ರಸ್ತ ಯುವತಿ ತನ್ನ ಮಗುವನ್ನು ಎತ್ತಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ನಿತ್ಯವು ಅಲೆದಾಡುತ್ತಿದ್ದಾರೆ. ಆಕೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಾಗಲೆಲ್ಲ ಉಮೇಶ್ ಎಸ್ಕೇಪ್ ಆಗ್ತಿದ್ದಾನೆ. ಅಲ್ಲದೆ, ಗೂಂಡಾಗಳನ್ನು ಮನೆಗೆ ಕಳುಹಿಸಿ ಗಲಾಟೆ ಮಾಡಿಸಿ, ಬೆದರಿಕೆ ಹಾಕಿಸುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಕಿರುಕುಳ ನೀಡುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿದರೆ, ಕ್ರಮಕ್ಕೆ ಮುಂದಾಗುತ್ತೇವೆ ಎಂದು ಬಳ್ಳಾರಿ ಎಸ್ಪಿ ಸೈದಯಲ್ ಅದಾವತ್ ಭರವಸೆ ನೀಡಿದ್ದಾರೆ.
ಬಳ್ಳಾರಿ ಸಬ್ ರಿಜಿಸ್ಟ್ರಾರ್ ಉಮೇಶ್ ಮೊದಲನೇ ಪತ್ನಿಯಿದ್ದರೂ ಮಾಡೆಲ್ ನಜ್ಮಿಮ್ ಖಾನ್ ಅನ್ನು ಮದುವೆಯಾದ್ದಾನೆ. ದೆಹಲಿ ಮೂಲದ ನಜ್ಮೀಮ್ ಖಾನ್ ಬೆಂಗಳೂರಿನಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾಗ ಉಮೇಶ್ ತನ್ನ ಹೆಸರು ಬದಲಾಯಿಕೊಂಡು ಸ್ನೇಹ ಬೆಳೆಸಿದ್ದಾನೆ. ತನ್ನ ಹೆಸರನ್ನು ರೆಹಾನ್ ಅಹಮದ್ ಎಂದು ಸುಳ್ಳು ಹೇಳಿ ಮುಸ್ಲಿಂ ಪದ್ಧತಿಯಂತೆ ಮದುವೆಯಾಗಿದ್ದಾನೆ. ಮೊದಲನೇ ಹೆಂಡತಿ ಮತ್ತು ಮಕ್ಕಳನ್ನು ತನ್ನ ಅತ್ತಿಗೆ ಹಾಗೂ ಅವರ ಮಕ್ಕಳು ಎಂದು ನಜ್ಮೀಮ್ ಖಾನ್ಗೆ ಉಮೇಶ್ ಪರಿಚಯಿಸಿದ್ದನೆಂದು ಆರೋಪಿಸಲಾಗಿದೆ. ಆ ಬಳಿಕ ಆಕೆಗೆ ಮಗುವನ್ನೂ ಕರುಣಿಸಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ
ಮೂರ್ನಾಲ್ಕು ವರ್ಷಗಳ ಹಿಂದೆ ನಜ್ಮಿಮ್ ಖಾನ್ ಬಳ್ಳಾರಿಗೆ ಬಂದ ಸಂದರ್ಭ ಉಮೇಶ್ ಜತೆಗಿದ್ದಾಗ ಸತ್ಯ ಬಯಲಾಗಿದೆ. ಉಮೇಶ್ಗೆ ಅತ್ತಿಗೆ ಇಲ್ಲ, ಹೆಂಡತಿಯನ್ನೇ ಅತ್ತಿಗೆ ಎಂದು ನಂಬಿಸಿದ್ದಾನೆ ಎಂಬುದು ತಿಳಿದಿದೆ. ಇದೆಲ್ಲ ತಿಳಿದ ಬಳಿಕ ಹತ್ತು ಕೋಟಿ ರೂ. ವರದಕ್ಷಿಣೆಗೆ ಉಮೇಶ್ ಪಟ್ಟು ಇಟ್ಟಿದ್ದಾನೆ ಎಂದು ನಜ್ಮೀಮ್ ಖಾನ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ಉಮೇಶ್ ಕೂಡ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸುತ್ತಿದ್ದಾರೆ.