'ಗೀತಾ' ಸೀರಿಯಲ್ ನಾಯಕಿ ನಟಿ ಭವ್ಯಾ ಗೌಡ ಬಳಿ ಎಷ್ಟು ಸಾವಿರ ಬಟ್ಟೆಗಳಿವೆ ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರಾ!
Sunday, April 3, 2022
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರ ವಾಗುತ್ತಿರುವ ‘ಗೀತಾ’ ಧಾರಾವಾಹಿ ಮೂಲಕ ನಟಿ ಭವ್ಯಾ ಗೌಡ ಕರುನಾಡಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ನಟಿ ಭವ್ಯಾ ಗೌಡ ಮಂಡ್ಯದ ನಾಗಮಂಗಲದ ಬೆಡಗಿ.
ಟಿಕ್ ಟಾಕ್ನಿಂದ ಬಹಳಷ್ಟು ಖ್ಯಾತಿ ಪಡೆದಿದ್ದ ಇವರು ಆರಂಭದಲ್ಲಿ ಗಗನ ಸಖಿ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಹೆತ್ತವರ ಆಸೆಯ ಮೆರೆಗೆ ನಟನೆಯತ್ತ ವಾಲಿರುವ ಭವ್ಯಾಗೌಡಗೆ ಇದೋಗ ಬೆಳ್ಳಿ ಪರದೆಯಲ್ಲಿ ನಟಿಸೋಕೆ ಕೂಡಾ ಆಫರ್ಗಳು ಬರುತ್ತಿದೆಯಂತೆ. ಸಾಕಷ್ಟು ಮಂದಿ ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿರುವ ಉದಾಹರಣೆ ಸಾಕಷ್ಟು ಇದೆ. ಇದೀಗ, ಈ ಸಾಲಿಗೆ ಭವ್ಯಾ ಗೌಡ ಅವರು ಸಹ ಸೇರಲಿದ್ದಾರೆ.
ಹೌದು, ನಟಿ ಭವ್ಯಾ ಗೌಡ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗುತ್ತಿದ್ದಾರೆ. ವಿಸ್ಮಯಾ ಗೌಡ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಡಿಯರ್ ಕಣ್ಮಣಿ’ ಸಿನಿಮಾ ಮೂಲಕ ಮೊದಲ ಬಾರಿಗೆ ಹಿರಿತೆರೆಯಲ್ಲಿ ಮಿಂಚಲಿದ್ದಾರೆ. ಆದರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗೀತಾ’ ಧಾರಾವಾಹಿ ವೀಕ್ಷಕರ ಮನಸ್ಸಲ್ಲಿ ಮನೆ ಮಾಡಿದೆ. ಈ ಧಾರಾವಾಹಿಯ ಸುದ್ದಿಯೊಂದು ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ‘ಗೀತಾ’ ಧಾರಾವಾಹಿಯಲ್ಲಿ ಭವ್ಯಾ ಗೌಡ ಅವರು ಒಂದು ದಿನ ಧರಿಸಿದ ಬಟ್ಟೆಯನ್ನು ಮತ್ತೊಂದು ದಿನ ಹಾಕಲ್ವಂತೆ. ಇನ್ನು, 'ಈಗಾಗಲೇ 300 ಎಪಿಸೋಡ್ ಶೂಟಿಂಗ್ ಮಾಡಿರುವ ನನ್ನ ಬಳಿ ಮೂರು ಸಾವಿರಕ್ಕೂ ಅಧಿಕ ಬಟ್ಟೆಗಳಿವೆ. ಮನೆ ತುಂಬಾ ಬರೀ ಬಟ್ಟೆಗಳೇ ಕಾಣಿಸುತ್ತವೆ”, ಎಂದು ಭವ್ಯಾ ಗೌಡ ಈ ಬಗ್ಗೆ ಪ್ರತಿಕ್ರಿಸಿದ್ದಾರೆ.