-->
ದೇಶಿ ನಿರ್ಮಿತ ಗನ್ ಹೊಂದಿದ್ದ ಶಿಕ್ಷಕಿ ಬಂಧನ!

ದೇಶಿ ನಿರ್ಮಿತ ಗನ್ ಹೊಂದಿದ್ದ ಶಿಕ್ಷಕಿ ಬಂಧನ!

ಮೈನ್​ಪುರಿ: ದೇಶಿ ನಿರ್ಮಿತ ಗನ್ ಹೊಂದಿದ್ದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿರುವ​ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಡೆದಿದೆ.

ಬಂಧಿತ ಶಿಕ್ಷಕಿಯನ್ನು ಕೃಷ್ಣಮಾ ಸಿಂಗ್​ ಯಾದವ್​ ಎಂದು ಗುರುತಿಸಲಾಗಿದೆ. 

ಶಿಕ್ಷಕಿ ಕೃಷ್ಣಮಾ ಸಿಂಗ್​ ಯಾದವ್ ಫಿರೋಜಾಬಾದ್​ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವೃತ್ತಿ ನಿಮಿತ್ತ ನಿನ್ನೆ ಮೈನ್​ಪುರಿಗೆ ಬಂದಿದ್ದ ವೇಳೆ ಆಕೆಯಲ್ಲಿ ನಾಡ ಬಂದೂಕು​ ಪತ್ತೆಯಾಗಿದೆ. ಮೈನ್​ಪುರಿಯ ಕೊಟ್ವಾಲಿ ಪ್ರದೇಶದಲ್ಲಿ ಮಹಿಳೆಯೊಬ್ಬಳು ಪಿಸ್ತೂಲ್​ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಳೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಶಿಕ್ಷಕಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಲ್ಲದೆ ಆಕೆಯಲ್ಲಿದ್ದ ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ವೀಡಿಯೋದಲ್ಲಿ ಮಹಿಳಾ ಕಾನ್ಸ್​ಟೇಬಲ್​ ಶಿಕ್ಷಕಿಯ ಜೇಬಿನಿಂದ 315 ಬೋರ್​ ದೇಶಿ ನಿರ್ಮಿತ ಪಿಸ್ತೂಲ್​ ಅನ್ನು ವಶಕ್ಕೆ ಪಡೆದುಕೊಂಡು ದೃಶ್ಯವಿದೆ. ಆರೋಪಿ ಶಿಕ್ಷಕಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಸ್ತೂಲ್​ ಸಾಗಿಸುತ್ತಿದ್ದರ ಹಿಂದಿನ ಕಾರಣ ತಿಳಿಯಲು ತನಿಖೆ ಆರಂಭವಾಗಿದೆ. 

Ads on article

Advertise in articles 1

advertising articles 2

Advertise under the article