DCC Bank Appointment- ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೇಮಕಾತಿ: 98 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೇಮಕಾತಿ: 98 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಬ್ಯಾಂಕ್ ನೌಕರರ ಸೇವಾ ನಿಯಮಾವಳಿ ಮತ್ತು ಸರಕಾರದ ಆದೇಶದ ಪ್ರಕಾರ ನೇಮಕಾತಿ ನಡೆಯುತ್ತಿದೆ.
ಅರ್ಹ ಅಭ್ಯರ್ಥಿಗಳು ಪೂರ್ಣ ವಿವರ ಅಗತ್ಯ ದಾಖಲಾತಿಗಳ ದೃಢೀಕೃತ ಪ್ರತಿ ಹಾಗೂ ಅರ್ಜಿ ಶುಲ್ಕದೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ 98
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-05-2022
1- ಆಪ್ತ ಸಹಾಯಕರು/ಶೀಘ್ರಲಿಪಿಗಾರರು (Private Assistant/Stenographer) 1
2- ಕಿರಿಯ ಸಹಾಯಕರು /ಕ್ಷೇತ್ರ ಅಧಿಕಾರಿಗಳು/ನಗದು ಗುಮಾಸ್ತರು (Junior Assistant/Field Worker/Cash Clerks) 73
3- ವಾಹನ ಚಾಲಕರು (Vehicle Drivers) 1
4- ಅಟೆಂಡರ್ (Attenders) 22
5- ಜಲಗಾರರು (Aquarists) 1
ವೇತನ ಶ್ರೇಣಿ:
ಆಪ್ತ ಸಹಾಯಕರು/ಶೀಘ್ರಲಿಪಿಗಾರರು (Private Assistant/Stenographer) Rs.33450-62600/-
ಕಿರಿಯ ಸಹಾಯಕರು /ಕ್ಷೇತ್ರ ಅಧಿಕಾರಿಗಳು/ನಗದು ಗುಮಾಸ್ತರು (Junior Assistant/Field Worker/Cash Clerks) Rs.30350-58250/-
ವಾಹನ ಚಾಲಕರು (Vehicle Drivers) Rs.27650-52650/-
ಅಟೆಂಡರ್ (Attenders) Rs.23500-47650/-
ಜಲಗಾರರು (Aquarists) Rs.17000-28950/
ಶೈಕ್ಷಣಿಕ ಅರ್ಹತೆ:
ಆಪ್ತ ಸಹಾಯಕರು/ಶೀಘ್ರಲಿಪಿಗಾರರು (Private Assistant/Stenographer): ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿರಬೇಕು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಏರ್ಪಡಿಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಕಂಪ್ಯೂಟರ್ ಜ್ಞಾನ ಇದ್ದವರಿಗೆ ಆದ್ಯತೆ
ಕಿರಿಯ ಸಹಾಯಕರು /ಕ್ಷೇತ್ರ ಅಧಿಕಾರಿಗಳು/ನಗದು ಗುಮಾಸ್ತರು (Junior Assistant/Field Worker/Cash Clerks): ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಸಹಕಾರ ವಿಷಯಗಳಲ್ಲಿ ವಿದ್ಯಾರ್ಹತೆ ಅನುಭವ ಇದ್ದವರಿಗೆ ಆದ್ಯತೆ ಕಂಪ್ಯೂಟರ್ ನಲ್ಲಿ ಹೆಚ್ಚಿನ ಜ್ಞಾನ ಹೊಂದಿದವರಿಗೆ ಆದ್ಯತೆ
ವಾಹನ ಚಾಲಕರು (Vehicle Drivers): ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು ಡ್ರೈವಿಂಗ್ ಲೈಸೆನ್ಸ್ ಬಂದಿರಬೇಕು
ಅಟೆಂಡರ್ (Attenders):ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು
ಜಲಗಾರರು (Aquarists): ಕನ್ನಡ ಭಾಷೆಯಲ್ಲಿ ನಾಲ್ಕನೇ ತರಗತಿಯವರೆಗೆ ಹೋಗಿರಬೇಕು
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಬಹುಮಾದರಿ ಪ್ರಶ್ನೆ ಆಯ್ಕೆ ಪರೀಕ್ಷೆ
ಅರ್ಜಿಯನ್ನು ಬ್ಯಾಂಕಿನ ವೆಬ್ಸೈಟ್ನಲ್ಲಿ ತಿಳಿಸಿರುವ ನಮೂನೆಯಲ್ಲಿ ಭರ್ತಿಮಾಡಿ ಸಲ್ಲಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ:
ಸದಸ್ಯ ಕಾರ್ಯದರ್ಶಿ
ನೇಮಕಾತಿ ಸಮಿತಿ ಹಾಗೂ
ಮುಖ್ಯ ಕಾರ್ಯನಿರ್ವಾಹಕರು,
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.,
ಶಿವಮೊಗ್ಗ
ಹೆಚ್ಚಿನ ಮಾಹಿತಿಗೆ ಈ ಅಧಿಸೂಚನೆಯನ್ನು ವೀಕ್ಷಿಸಿ:
ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೇಮಕಾತಿ