Job in Mini Rathna- ಸರ್ಕಾರಿ ಸ್ವಾಮ್ಯದ ಮಿನಿರತ್ನದಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ
ಸರ್ಕಾರಿ ಸ್ವಾಮ್ಯದ ಮಿನಿರತ್ನದಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ
ಸರಕಾರಿ ಸ್ವಾಮ್ಯದ ಎಚ್ ಎಲ್ ಎಲ್ ಲೈವ್ ಕೇರ್ ಲಿಮಿಟೆಡ್ (HLL LifecareLtd) ಸಾರ್ವಜನಿಕ ರಂಗದ ಮಿನಿರತ್ನ. ಈ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ನೇಮಕಾತಿ ನಡೆಯುತ್ತಿದೆ.
ಈ ಉದ್ಯೋಗಾವಕಾಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದ ವಿವಿಧ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಾಪಿಸಿರುವ ಹಾಗೂ ಸ್ಥಾಪಿಸಲು ಉದ್ದೇಶಿಸಿರುವ ಮೆಡಿಕಲ್ ಸ್ಟೋರ್‌ಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ನೇಮಕಾತಿಯು ನಿರ್ದಿಷ್ಟ ಅವಧಿಗೆ ಸೇರಿದ ಗುತ್ತಿಗೆ ಆಧಾರದ ನೇಮಕಾತಿ ಆಗಿರುತ್ತದೆ
ಹುದ್ದೆಯ ಹೆಸರು ಫಾರ್ಮಸಿಸ್ಟ್
ಶೈಕ್ಷಣಿಕ ಅರ್ಹತೆ: B Pharma/ D Pharma ಹಾಗೂ ಮೂರು ವರ್ಷಗಳ ಅನುಭವ ಅಗತ್ಯ
ಅರ್ಹ ಅಭ್ಯರ್ಥಿಗಳು ನೇರ ವಾಕ್ ಇನ್ ಇಂಟರ್ವ್ಯೂ ನಲ್ಲಿ ಭಾಗವಹಿಸಬಹುದು
ಸಂದರ್ಶನದ ದಿನಾಂಕ 11-4-2022 (Time: 10 AM to 1 PM)
ಸಂದರ್ಶನದ ಸ್ಥಳ: ಹೋಟೆಲ್ ಮೋತಿಮಹಲ್ ಹಳ್ಳಿ ರೋಡ್ ಮಂಗಳೂರು
ಸಂದರ್ಶನದ ಸಮಯದಲ್ಲಿ ಹುದ್ದೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು.
Contact: 04712354949