ಮಂಗಳೂರು: ಇದ್ದಿಲು - ಮರಳಿನಲ್ಲಿ ಮೂಡಿತು ರಾಕಿಂಗ್ ಸ್ಟಾರ್ 'KGF -2' ಪೋಸ್ಟರ್
Thursday, April 14, 2022
ಮಂಗಳೂರು: ಇಂದು ಎಲ್ಲೆಡೆ 'KGF - 2' ಸಿನಿಮಾದ ಹವಾನೇ ಕಂಡು ಬರುತ್ತಿದೆ. ವಿಶ್ವದಾದ್ಯಂತ ರಿಲೀಸ್ ಆಗಿರುವ KGF - 2 ಸಿನಿಮಾ ವೀಕ್ಷಿಸಲು ಅಭಿಮಾನಿಗಳು ನಿದ್ದೆಗೆಟ್ಟು ಸಿನಿಮಾ ಮಂದಿರಗಳ ಮುಂದೆ ಕಾಯುತ್ತಿದ್ದಾರೆ. ಮೂಡುಬಿದಿರೆಯ ಯುವ ಕಲಾವಿದ ತಿಲಕ್ ಕುಲಾಲ್ ಇದ್ದಿಲು ಹಾಗೂ ಮರಳನ್ನು ಬಳಸಿ 'ಕೆಜಿಎಫ್ ಚಾಪ್ಟರ್ -2' ನ ವಿಶೇಷ ಪೋಸ್ಟರ್ ಅನ್ನು ರಚಿಸಿದ್ದಾರೆ. ಈ ಪೋಸ್ಟರ್ ನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು ತಿಲಕ್ ಕುಲಾಲ್ 'KGF - 2' ಸಿನಿಮಾ ಪ್ರೊಮೋಷನ್ ಗೆಂದು ಇದ್ದಿಲು ಹಾಗೂ ಮರಳಿನಿಂದಲೇ 'ಕೆಜಿಎಫ್ ಚಾಪ್ಟರ್ -2' ಪೋಸ್ಟರ್ ಅನ್ನು ಬಿಡಿಸಿದ್ದಾರೆ. 1000 Sq Feet ನ ಈ ವಿಶೇಷ ಪೋಸ್ಟರ್ ಗೆ 80KG ಚಾರ್ ಕೋಲ್ ಹಾಗೂ 90KG ಮರಳು ಬಳಕೆಯಾಗಿದೆ.
ತಿಲಕ್ ಕುಲಾಲ್
ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ 'KGF- 2' ವಿಶೇಷ ಪೋಸ್ಟರ್ ರಚಿಸಲಾಗಿದೆ. ಶುಕ್ರವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರವರೆಗಿನ ಸತತ ಎರಡೂವರೆ ಗಂಟೆಯ ಪರಿಶ್ರಮದಲ್ಲಿ ಈ ವಿಶೇಷ ಪೋಸ್ಟರ್ ರಚನೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಚಾರ್ ಕೋಲ್ ಹಾಗೂ ಮರಳಿನಿಂದ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಪೋಸ್ಟರ್ ರಚನೆಯಾಗಿದೆ.
ಮೂಡುಬಿದಿರೆ ಒಂಟಿಕಟ್ಟೆ ನಿವಾಸಿ ಫೈನ್ ಆರ್ಟ್ಸ್ ಕಲಾವಿದ ತಿಲಕ್ ಕುಲಾಲ್ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಕಲಾ ಶಿಕ್ಷಣ ಪಡೆದಿದ್ದಾರೆ. ಈಗ ಸುಳ್ಯದಲ್ಲಿ ಕಲೆಯ ಮೂಲಕವೇ ವೃತ್ತಿ ನಿರ್ವಹಿಸುತ್ತಿದ್ದಾರೆ. ಈ ಪೋಸ್ಟರ್ ರಚನೆಯಲ್ಲಿ ತಿಲಕ್ ಕುಲಾಲ್ ಗೆ ಸ್ನೇಹಿತರಾದ ಅಕ್ಷಿತ್ ಹಾಗೂ ರೋಹಿತ್ ಸಹಕಾರ ನೀಡಿದ್ದಾರೆ.