ಮನೆಗೆ ಕನ್ನ ಹಾಕಲು ಬಂದು ಬಾಲಕಿಯನ್ನೇ ಅಪಹರಣ ಮಾಡಿದ ದುಷ್ಕರ್ಮಿ!
Monday, April 4, 2022
ಚಿಕ್ಕೋಡಿ: ಮನೆಯೊಂದಕ್ಕೆ ಕನ್ನ ಹಾಕಲು ಬಂದಿರುವ ದುಷ್ಕರ್ಮಿ ಮನೆಯಲ್ಲಿದ್ದ ಬಾಲಕಿಯನ್ನೇ ಅಪಹರಣ ಮಾಡಿರುವ ವಿಚಿತ್ರ ಘಟನೆಯೊಂದು ಬೆಳಗಾವಿಯ ಮಾಂಜರಿವಾಡಿ ಗ್ರಾಮದಲ್ಲಿ ನಡೆದಿದೆ.
ಅನೀಲ್ ರಾಮು ಲಂಬೂಗೋಳ (31) ಬಾಲಕಿಯನ್ನು ಅಪಹರಿಸಿರುವ ದುಷ್ಕರ್ಮಿ. ಸುರೇಶ್ ಕಾಂಬಳೆ ಎಂಬುವವರ ಮಗಳು ಪ್ರಿಯಾ ಕಾಂಬಳೆ (11) ಅಪಹರಣಗೊಂಡ ಬಾಲಕಿ.
ಮನೆಯವರು ಸದ್ಯ ಬಾಲಕಿ ಪ್ರಿಯಾ ಕಾಂಬಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪ್ರಿಯಾ ಕಾಂಬಳೆ ಅಪಹರಣದ ಬಗ್ಗೆ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.