KPSC recruitment- ಪೌರಾಡಳಿತ ಇಲಾಖೆ: ಸಿ ಗ್ರೂಪ್ ಹುದ್ದೆಗಳ ಭರ್ತಿಗೆ KPSC ಅರ್ಜಿ ಆಹ್ವಾನ
ಪೌರಾಡಳಿತ ಇಲಾಖೆ: ಸಿ ಗ್ರೂಪ್ ಹುದ್ದೆಗಳ ಭರ್ತಿಗೆ KPSC ಅರ್ಜಿ ಆಹ್ವಾನ
ಕರ್ನಾಟಕ ಲೋಕಸೇವಾ ಆಯೋಗವು(KPSC) ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ) ಖಾಲಿ ಇರುವ ಗ್ರೂಪ್ 'C' ವೃಂದದ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವುದಾಗಿ ಆಯೋಗ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ.
ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ನೇಮಕಾತಿ ಬಯಸಿ ಅರ್ಜಿ ಸಲ್ಲಿಸಬಹುದು.
ವಿವರಗಳು ಈ ಕೆಳಗಿನಂತಿವೆ...;
ಕಿರಿಯ ಎಂಜಿನಿಯರ್(ಸಿವಿಲ್),
ಕಿರಿಯ ಆರೋಗ್ಯ ನಿರೀಕ್ಷಕರು,
ಎಲೆಕ್ಟ್ರೀಷಿಯನ್ ಗ್ರೇಡ್–1 ಮತ್ತು
ಎಲೆಕ್ಟ್ರೀಷಿಯನ್ ಗ್ರೇಡ್ 2,
ನೀರು ಸರಬರಾಜು ಓಪರೇಟರ್
ಸಹಾಯಕ ನೀರು ಸರಬರಾಜು ಆಪರೇಟರ್
ಒಟ್ಟು ಇರುವ ಖಾಲಿ ಹುದ್ದೆಗಳು: 410 ಹುದ್ದೆಗಳು
ವಿದ್ಯಾರ್ಹತೆ:
೧) ಕಿರಿಯ ಎಂಜಿನಿಯರ್ ಹುದ್ದೆಗೆ ಮೂರು ವರ್ಷಗಳ ಅವಧಿಯ ಸಿವಿಲ್ ಎಂಜಿನಿಯರಿಂಗ್ ವಿಷಯದಲ್ಲಿ ಡಿಪ್ಲೊಮಾ ಪಾಸಾಗಿರಬೇಕು.
೨) ಎಲೆಕ್ಟ್ರಿಲ್ ಎಂಜಿನಿಯರ್ ಹುದ್ದೆಗೆ ಎರಡು ವರ್ಷಗಳ ಅವಧಿಯ ಎಲೆಕ್ಟ್ರಿಕಲ್ ಅಥವಾ ಫಿಟರ್‌ನಲ್ಲಿ ಐಟಿಐ ಜೊತೆಗೆ, ಒಂದು ವರ್ಷ ಅಪ್ರೆಂಟಿಷಿಪ್ ಟ್ರೈನಿಂಗ್ ಪೂರ್ಣಗೊಳಿಸಿರಬೇಕು.
೩) ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಗೆ ಎರಡು ವರ್ಷಗಳ ಅವಧಿಯ ಹೆಲ್ತ್ ಇನ್‌ಸ್ಪೆಕ್ಟರ್ ಡಿಪ್ಲೊಮಾ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಎಲ್ಲ ಹುದ್ದೆಗಳಿಗೆ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ ಹೇಗೆ?: ಆನ್‌ಲೈನ್ ಮಾತ್ರ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನ: 27-04-2022
ಆಯ್ಕೆ ಪ್ರಕ್ರಿಯೆ: ಎರಡು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅಧಿಸೂಚನೆ ಮಾಹಿತಿಗಾಗಿ
https://www.kpscrecruitment.in/PublicApp/STD/PSC-201-RTB-2-2021-22-2431.pdf