MLC Dr Bhandary Tour- ಶಾಸಕ ಮಂಜುನಾಥ ಭಂಡಾರಿ ಮಿಂಚಿನ ಪ್ರವಾಸ: ಕಾಂಗ್ರೆಸ್ ಸಂಘಟನೆಯಲ್ಲಿ ಹೊಸ ಚೈತನ್ಯ
ಶಾಸಕ ಮಂಜುನಾಥ ಭಂಡಾರಿ ಮಿಂಚಿನ ಪ್ರವಾಸ: ಕಾಂಗ್ರೆಸ್ ಸಂಘಟನೆಯಲ್ಲಿ ಹೊಸ ಚೈತನ್ಯ
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ದಕ್ಷಿಣ ಕನ್ನಡದ ವಿವಿಧ ತಾಲೂಕುಗಳಲ್ಲಿ ಮಿಂಚಿನ ಪ್ರವಾಸ ಮಾಡಿ ಸ್ಥಳೀಯ ನಾಯಕರ ಜೊತೆ ಸಂವಾದ, ಮಾತುಕತೆ ನಡೆಸಿದ್ದಾರೆ. ಅವರ ಪ್ರವಾಸದಿಂದ ಕಾಂಗ್ರೆಸ್ ಸಂಘಟನೆಯಲ್ಲಿ ಹೊಸ ಚೈತನ್ಯ ಸಂಚಾರವಾಗಿದೆ.
ಶಾಸಕರ ಜೊತೆಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ಸುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು ಅವರೂ ಪ್ರವಾಸದಲ್ಲಿ ತೊಡಗಿಸಿಕೊಂಡಿದ್ದರು.
ಸೋಮವಾರ ಶಾಸಕ ಭಂಡಾರಿಯವರು, ಸುಳ್ಯ ಕ್ಷೇತ್ರದ ಜಾಲ್ಸೂರು , ಆರಂತೋಡು, ಗುತ್ತಿಗಾರು, ಬೆಳ್ಳಾರೆ ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷದಲ್ಲಿ ಸ್ಪರ್ಧಿಸಿದ್ದ ಪ್ರತಿನಿಧಿಗಳು , ಪಕ್ಷದ ಮುಖ್ಯ ಕಾರ್ಯಕರ್ತರು , ನಾಯಕರುಗಳು ಜೊತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದರು.
ಈ ಮುಖಾಮುಖಿ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಎದುರಿಸುತ್ತಿರುವ 15ನೇ ಹಣಕಾಸು ಅನುದಾನ ಹಂಚಿಕೆ ತಾರತಮ್ಯ , ಇ-ಸ್ವತ್ತು ಸಮಸ್ಯೆಗಳು , ನಮ್ಮ ಗ್ರಾಮ ನಮ್ಮ ಯೋಜನೆಯ ಅನುಷ್ಠಾನದಲ್ಲಿರುವ ಲೋಪದೋಷಗಳು ಇತ್ಯಾದಿ ವಿಷಯಗಳ ಬಗ್ಗೆ ಸ್ಥಳೀಯ ನಾಯಕರು ವಿಧಾನ ಪರಿಷತ್ತಿನ ಸದಸ್ಯರುಗಳ ಗಮನ ಸೆಳೆದರು.
ಈ ಬಗ್ಗೆ ಉತ್ತರಿಸಿದ ವಿಧಾನ ಪರಿಷತ್ತಿನ ಸದಸ್ಯರುಗಳು ಮುಂದಿನ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಿ.ಸಿ. ಜಯರಾಮ್ ರವರು ಉಪಸ್ಥಿತರಿದ್ದರು.
ಇದನ್ನೂ ಓದಿ:
ಫಿಶ್ ಮೀಲ್ ದುರಂತ: ತಲೆ ಹಾಕದ ಜನನಾಯಕರು!- ಸಂಘಟನೆಗಳ ಮಧ್ಯಪ್ರವೇಶದಿಂದ 15 ಲಕ್ಷ ರೂ. ಪರಿಹಾರ