ಮಲಗಿದ್ದಲ್ಲಿಯೇ ಪತಿಯ ಕೊಲೆಯಾಗಿದೆ ಎಂದು ಡ್ರಾಮಾ ಆಡಿದ್ದ ಖತರ್ನಾಕ್ ಮಹಿಳೆ ಅರೆಸ್ಟ್
Wednesday, April 13, 2022
ಕೊಪ್ಪಳ: ಮಲಗಿದ್ದಲ್ಲಿಯೇ ಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆಯಾಗೈಯ್ಯಲಾಗಿದೆ ಎಂದು ನಾಟಕವಾಡಿದ್ದ ಖತರ್ನಾಕ್ ಮಹಿಳೆ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಡಲಗಿರಿ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ. ದಿನನಿತ್ಯ ಪತಿಯಿಂದ ಕಿರುಕುಳ ತಾಳಲಾರದ ಹಿನ್ನೆಲೆಯಲ್ಲಿ ಆತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಆರೋಪಿತೆ ಶಿಲ್ಪಾ ತಪ್ಪೊಪ್ಪಿಕೊಂಡಿದ್ದಾಳೆ. ಮಂಡಲಗಿರಿ ಕ್ರಾಸ್ ನಲ್ಲಿ ಹೋಟೆಲ್ ನಡೆಸುತ್ತಿದ್ದ ಸಿದ್ದಲಿಂಗಪ್ಪ ದಂಪತಿ ನಡುವೆ ದಿನನಿತ್ಯ ನಡೆಯುತ್ತಿದ್ದ ಜಗಳವೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಆರೋಪಿತೆ ಶಿಲ್ಪಾ ತನ್ನ ಪತಿಯನ್ನು ಯಾರೋ ಕೊಲೆ ಮಾಡಿದ್ದಾರೆಂದು ನಾಟಕವಾಡಿದ್ದಳು. ಆದರೆ ಪೊಲೀಸ್ ತನಿಖೆ ವೇಳೆ ತಾನೇ ಕೊಲೆಗೈದಿರುವುದಾಗಿ ಸತ್ಯ ಬಾಯಿಬಿಟ್ಟಿದ್ದಾಳೆ. ಪತಿಯ ನಿರಂತರ ಕಿರುಕುಳವೇ ಕೊಲೆಗೆ ಕಾರಣ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಈ ಬಗ್ಗೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.