ಮಾದಕವಾಗಿ ಫೋಟೋ ಶೂಟ್ ಮಾಡಿಕೊಂಡ ನಟಿ ರಿಚಾ ಚಡ್ಡಾ!
Wednesday, April 6, 2022
ಮಂಗಳೂರು: ಮಾದಕ ಫೋಟೋ ಶೂಟ್ ಮಾಡಿಕೊಂಡಿರುವ ಬಾಲಿವುಡ್ ನಟಿ ರಿಚಾ ಚಡ್ಡಾ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ನಟಿ ರಿಚಾ ಚಡ್ಡಾ ಇತ್ತೀಚಿಗೆ ಕಪ್ಪು ಉಡುಪು ಧರಿಸಿ ಎದೆಯ ಭಾಗವನ್ನು ತೋರಿಸುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಮಾಡಿದೆ. ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಫೋಟೋಗಳಿಗೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿರುವ ನಟಿ ರಿಚಾ ಚಡ್ಡಾ, 'ನಾನು ಫೋಟೋ ಶೂಟ್ ಮಾಡಲು ಇಷ್ಟ ಪಡುತ್ತೇನೆ. ಅಲ್ಲಿ ಛಾಯಾಗ್ರಾಹಕ ಹಾಗೂ ನನ್ನ ನಡುವೆ ಸ್ನೇಹವಿದೆ. ಈ ಫೋಟೋ ಶೂಟ್ ಮಾಡುವ ಸಂದರ್ಭ ನನಗೆ ಒಂದು ಪಾತ್ರ ನಿರ್ವಹಿಸುವಂತೆ ಅನಿಸಿತ್ತು. ಜೊತೆಗೆ ತಾವು ತೂಕ ಇಳಿಸಿಕೊಂಡಿರುವ ಬಗ್ಗೆ ಬರೆದಿರು ನಟಿ, ತೂಕ ನಷ್ಟವು ಆರೋಗ್ಯಕರ ಜೀವನ ಹೊಂದುವ ಸಾಧನವಾಗಿದೆ ಎಂದು ಹೇಳಿದ್ದಾರೆ.
ರಿಚಾ ಚಡ್ಡಾ ಸದ್ಯ 'ಫುಕ್ರೆ 3' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಸಂಜಯ್ ಲೀಲಾ ಬನ್ಸಾಲಿ ಅವರ 'ಹೀರಾ ಮಂದಿ' , 'ದಿ ಗ್ರೇಟ್ ಇಂಡಿಯನ್ ಮರ್ಡರ್' ಸೀಸನ್ 2 ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.