-->
'ಪಿಗ್ಗಿ' ಮಗುವಿಗೆ ಸಂಸ್ಕೃತದ ಹೆಸರು!: ಬಹಿರಂಗಗೊಳಿಸಿದ ಪ್ರಿಯಾಂಕಾ ಚೋಪ್ರಾ

'ಪಿಗ್ಗಿ' ಮಗುವಿಗೆ ಸಂಸ್ಕೃತದ ಹೆಸರು!: ಬಹಿರಂಗಗೊಳಿಸಿದ ಪ್ರಿಯಾಂಕಾ ಚೋಪ್ರಾ

ಮುಂಬೈ: ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಸ್​ ದಂಪತಿ ತಮ್ಮ ಮುದ್ದಾದ ಮಗುವಿಗೆ ಹೆಸರನ್ನಿಟ್ಟಿದ್ದು, ಆ ಹೆಸರನ್ನು ಅವರು ಬಹಿರಂಗಗೊಳಿಸಿದ್ದಾರೆ. ಅವರು ರ
ತಮ್ಮ ಮಗುವಿಗೆ ಸಂಸ್ಕೃತ ಪದದ ಹೆಸರನ್ನಿಟ್ಟಿದ್ದಾರೆ.

ದಂಪತಿ ಕಳೆದ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ  ಹೆಣ್ಣು ಮಗುವಿನ ಪೋಷಕರಾಗಿದ್ದಾರೆ‌. ಇದೀಗ ಪ್ರಿಯಾಂಕಾ ಚೋಪ್ರಾ ತಮ್ಮ ಮಗುವಿನ ಹೆಸರನ್ನು ಬಹಿರಂಗಗೊಳಿಸಿದ್ದಾರೆ‌. ದಂಪತಿ ತಮ್ಮ ಮಗುವಿಗೆ ಮಾಲತಿ ಮೇರಿ ಚೋಪ್ರಾ ಜೋನಸ್​ ಎಂದು ಹೆಸರಿಟ್ಟಿದ್ದಾರಂತೆ. 

ಮಾಲತಿ ಎಂಬುದು ಸಂಸ್ಕೃತ ಪದವಾಗಿದ್ದು, ಈ ಪದಕ್ಕೆ ಪುಷ್ಪದ ಸುವಾಸನೆ ಎಂಬ ಅರ್ಥವಿದೆ. ಹಾಗೆಯೇ ಮೇರಿ ಎಂದರೆ ಸಮುದ್ರದ ತಾರೆ ಹಾಗೂ ಫ್ರೆಂಚ್​ನಲ್ಲಿ ಜೀಸಸ್​ನ ತಾಯಿ ಎಂಬರ್ಥ ನೀಡುತ್ತದೆ. ಮಾಲತಿ ಮೇರಿ ಹೆಸರಿನೊಂದಿಗೆ ಪ್ರಿಯಾಂಕಾ ಹಾಗೂ ನಿಕ್ ಸರ್ನೇಮ್ ಗಳನ್ನು ಜೋಡಿಸಿ  ಮಾಲತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಡಲಾಗಿದೆ. 

Ads on article

Advertise in articles 1

advertising articles 2

Advertise under the article