ದೂರು ನೀಡಲು ಬಂದಾಕೆಯಿಂದ ಮಸಾಜ್ ಮಾಡಿಸಿದ ಪೊಲೀಸಪ್ಪ ಸಸ್ಪೆಂಡ್!
Saturday, April 30, 2022
ದೂರು ನೀಡಲು ಬಂದಾಕೆಯಿಂದ ಮಸಾಜ್ ಮಾಡಿಸಿದ ಪೊಲೀಸಪ್ಪ ಸಸ್ಪೆಂಡ್!
ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಸಂತ್ರಸ್ತ ಮಹಿಳೆಯೊಬ್ಬರಿಂದ ಪೊಲೀಸ್ ಅಧಿಕಾರಿಯೊಬ್ಬರು ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಭೂಪನನ್ನು ಅಮಾನತು ಮಾಡಿ ಘಟನೆಯ ಬಗ್ಗೆ ಇಲಾಖಾ ತನಿಖೆಗೆ ಆದೇಶ ನೀಡಿದ್ದಾರೆ.
ಅಂದ ಹಾಗೆ, ಈ ಘಟನೆ ನಡೆದಿರುವುದು ಬಿಹಾರದಲ್ಲಿ.
ಮಸಾಜ್ ಮಾಡಿಕೊಂಡ ಹಿರಿಯ ಪೊಲೀಸ್ ಅಧಿಕಾರಿ ಶಶಿಭೂಷಣ್ ಸಿನ್ಹಾ. ಈತ ದೂರು ನೀಡಲು ಬರುತ್ತಿದ್ದ ಮಹಿಳೆಯರಿಂದ ಶರ್ಟ್ ಬಿಚ್ಚಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ಹೀಗೆ ಮಾಡಿರುವ ಒಂದು ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್ ಈತನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಘಟನೆಯ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.