ತಮ್ಮ ಮದುವೆಯ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್
Friday, April 15, 2022
ಹೈದರಾಬಾದ್: ಸಿನಿಮಾರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಖ್ಯಾತರಾದ ಪ್ರಭಾಸ್ 41 ವಯಸ್ಸಾದರೂ ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಇತ್ತೀಚೆಗೆ ಅವರು ನಟಿಸಿರುವ ರಾಧೆಶ್ಯಾಮ್ ಸಿನಿಮ ಬಿಡುಗಡೆಯಾಗಿದೆ. ಅಲ್ಲದೆ ಇದೀಗ ಅವದು ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ನಟನೆಯಲ್ಲಿಯೇ ಮುಳುಗಿ ಹೋಗಿರುವ ಪ್ರಭಾಸ್ ವಿವಾಹವಾಗುವುದನ್ನೇ ಮರೆತುಬಿಟ್ಟಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರಭಾಸ್ ಯಾವಾಗ ವಿವಾಹವಾಗುತ್ತಾರೆ ಎಂದು ಎದುರು ನೋಡುತ್ತಿದ್ದಾರೆ. ಇದೀಗ ಅವರ ಮದುವೆ ಕುರಿತು ಸ್ವತಃ ಪ್ರಭಾಸ್ ಇಂಡಿಯಾ ಟುಡೆ ನಡೆಸಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಸಿನಿಮಾ ಥಿಯೇಟ್ರಿಕಲ್ ರಿಲೀಸ್ ಹಾಗೂ ಪ್ರಿ-ರಿಲೀಸ್ ವ್ಯವಹಾರದಿಂದ 400 ಕೋಟಿ ರೂ. ಬಂಡವಾಳ ಬಂದಿದೆ. ಸಿನಿಮಾ ಏಪ್ರಿಲ್ 24 ರಂದು ಮಧ್ಯಾಹ್ನ 12 ಗಂಟೆಗೆ ಜೀ ಸಿನಿಮಾದಲ್ಲಿ ಮೊದಲ ಪ್ರದರ್ಶನಕ್ಕೆ ಸಿದ್ಧವಾಗಿದೆ. ಸದ್ಯ ಪ್ರಭಾಸ್ ಅವರು ತಮ್ಮ ಮುಂಬರುವ ಸಿನಿಮಾಗಳಲ್ಲಿ ಅಭಿನಯಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
ಈ ನಡುವೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿರುವ ಪ್ರಭಾಸ್, ನಾನು ಎಲ್ಲಿಗೆ ಹೋದರೂ ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿರುತ್ತಾರೆ. ಇದರಿಂದ ನನಗೇನು ಮುಜುಗರವಿಲ್ಲ. ಏಕೆಂದರೆ, ಇದು ಅಭಿಮಾನಿಗ ಕಾಳಜಿ ಎಂದು ನಾನು ಭಾವಿಸುತ್ತೇನೆ. ಮದುವೆ ಸಾಕಷ್ಟು ಸಹಜ ಮತ್ತು ಸಾಮಾನ್ಯ ಪ್ರಶ್ನೆಯಾಗಿದೆ. ನಾನು ಕೂಡಾ ಅವರ ಸ್ಥಾನದಲ್ಲಿದ್ದರೆ, ಅದೇ ಕಾಳಜಿ ವಹಿಸುತ್ತಿದ್ದೆ ಎಂದಿದ್ದಾರೆ.
ಹಾಗಾದರೆ, ಶೀಘ್ರದಲ್ಲೇ ಮದುವೆ ಆಗಲು ಚಿಂತನೆ ನಡೆಸಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಭಾಸ್, ಈ ಪ್ರಶ್ನೆಗೆ ನನ್ನ ಬಳಿ ಉತ್ತರ ಸಿಕ್ಕಿದ ಬಳಿಕ ಖಂಡಿತಾ ಘೋಷಣೆ ಮಾಡುತ್ತೇನೆ ಎಂದು ನಕ್ಕರು. ಈಗಲೂ ತಮ್ಮ ವಿವಾಹದ ಬಗ್ಗೆ ಪ್ರಭಾಸ್ ನೀಡಿರುವ ಹೇಳಿಕೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದ್ದು, ಅವರ ಅಭಿಮಾನಿಗಳಿಗೆ ಕಾಯುವಿಕೆ ಮುಂದುವರಿದಿದೆ.