-->
ವಿಶಿಷ್ಟ ರೀತಿಯಲ್ಲಿ ತಾಯಿಯಾಗುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟಿ ಪ್ರಣೀತಾ ಸುಭಾಷ್!

ವಿಶಿಷ್ಟ ರೀತಿಯಲ್ಲಿ ತಾಯಿಯಾಗುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟಿ ಪ್ರಣೀತಾ ಸುಭಾಷ್!

ಬೆಂಗಳೂರು: ಸೌತ್ ಇಂಡಿಯಾದ ಬೇಡಿಕೆಯ ನಟಿ ಪ್ರಣೀತಾ ಸುಭಾಷ್ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. ಆ ಬಳಿಕ ಅವರು ಅಭಿಮಾನಿಗಳಲ್ಲಿ ಕ್ಷಮೆ ಕೋರಿ ಸ್ಪಷ್ಟನೆ ನೀಡಿದ್ದೂ ಎಲ್ಲರಿಗೂ ಗೊತ್ತಿದೆ. ಇದೀಗ ತಾಜಾ ಸುದ್ದಿಯೇನೆಂದರೆ ಪ್ರಣೀತಾ ಸುಭಾಷ್ ಅವರು ತಾಯಿಯಾಗುತ್ತಿದ್ದಾರೆ. 

ಗರ್ಭಿಣಿಯಾಗಿರುವ ಪ್ರಣೀತಾ, ಈ ವಿಚಾರವನ್ನು ವಿಭಿನ್ನವಾಗಿ ಫೋಟೋಗಳ ಮೂಲಕ ತಿಳಿಸಿದ್ದಾರೆ. ಪತಿ ಹಾಗೂ ಉದ್ಯಮಿಯಾಗಿರುವ ನಿತಿನ್ ರಾಜು ಅವರು ಎತ್ತಿಕೊಂಡಿರುವ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿ ತಾಯಿ ಆಗುತ್ತಿರುವ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಒಂದು ಫೋಟೋದಲ್ಲಿ ಪ್ರಣೀತಾ ಮತ್ತು ನಿತಿನ್​ ಪ್ರಗ್ನೆಂಟ್​ ಕಿಟ್​ ಹಿಡಿದಿದ್ದರೆ, ಮತ್ತೊಂದು ಫೋಟೋದಲ್ಲಿ ನಿತಿನ್​, ಪ್ರಣಿತಾರನ್ನು ಎತ್ತಿಕೊಂಡಿದ್ದು, ಪ್ರಣೀತಾ ಸ್ಕ್ಯಾನ್​ ರಿಪೋರ್ಟ್​ ಅನ್ನು ಕ್ಯಾಮೆರಾಗೆ ಪ್ರದರ್ಶಿಸುವ ಮೂಲಕ ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 


ಸದ್ಯ ಪ್ರಣೀತಾ ಸುಭಾಷ್ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಣೀತಾ ಕಳೆದ ವರ್ಷ ಮೇ 30ರಂದು ನಿತಿನ್​ ರೊಂದಿಗೆ ಗುಟ್ಟಾಗಿ ಮದುವೆ ಆಗಿದ್ದರು. ಮದುವೆ ಬಳಿಕ ಸುದೀರ್ಘ ಪತ್ರ ಬರೆದಿದ್ದ ಪ್ರಣೀತಾ, 2021ರ ಮೇ 30ರಂದು ಅತೀ ಆಪ್ತರ ಸಮ್ಮುಖದಲ್ಲಿ ನಾನಹ ನಿತಿನ್ ರಾಜುರೊಂದಿಗೆ ಸಪ್ತಪದಿ ತುಳಿದಿದ್ದೇನೆ. ಈ ಸಂತಸದ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮದುವೆಯ ದಿನಾಂಕ ಅರ್ಜೆಂಟಾಗಿ ನಿಗದಿಯಾಯಿತು. ಕೊರೊನಾ ಹಿನ್ನೆಲೆ ಮದುವೆಗೆ ಯಾರನ್ನೂ ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಕರೊನಾ ನಿಯಮವನ್ನು ಕಟ್ಟುನಿಟ್ಟಾಗಿ ನಾವೂ ಪಾಲಿಸಬೇಕಿದೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ’ ಎಂದು ಬರೆದಿದ್ದರು. 

ದರ್ಶನ್​ ಅಭಿನಯದ ‘ಪೊರ್ಕಿ’ ಸಿನಿಮಾದ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಪ್ರಣೀತಾ ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. 

Ads on article

Advertise in articles 1

advertising articles 2

Advertise under the article