ಹಿಂದೂಸ್ತಾನ್ ಹಿಂದಿ ಭಾಷಿಗರದ್ದು.. ಉಳಿದವರು ಭಾರತ ಬಿಟ್ಟು ತೊಲಗಿ: ಯುಪಿ ಸಚಿವನ ವಿವಾದಾತ್ಮಕ ಹೇಳಿಕೆ
ಹಿಂದೂಸ್ತಾನ್ ಹಿಂದಿ ಭಾಷಿಗರದ್ದು.. ಉಳಿದವರು ಭಾರತ ಬಿಟ್ಟು ತೊಲಗಿ: ಯುಪಿ ಸಚಿವನ ವಿವಾದಾತ್ಮಕ ಹೇಳಿಕೆ
ಹಿಂದಿಯನ್ನು ಪ್ರೀತಿಸದವರು ಪರಕೀಯರು. ಹಿಂದಿ ಮಾತನಾಡಲು ಬಾರದವರು ಭಾರತ ಬಿಟ್ಟು ಬೇರೆ ಕಡೆ ಹೋಗಿ ಬದುಕಬಹುದು. ದೇಶದಲ್ಲಿ ಇರಲು ಇಚ್ಚಿಸುವವರು ಹಿಂದಿಯನ್ನು ಪ್ರೀತಿಸಬೇಕು ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಎಚ್ಚರಿಕೆ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ವಿರುದ್ಧ ಟ್ವೀಟ್ ಮಾಡಿದ್ದ ಹಿಂದಿ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ವಿಚಾರ ರಾಷ್ಟ್ರದಾದ್ಯಂತ ಚರ್ಚೆಗೀಡಾಗುತ್ತಿದೆ.
ಹಿಂದಿ ಭಾಷೆ ಕುರಿತ ಎದ್ದಿರುವ ವಿವಾದಕ್ಕೆ ಬಿಸಿ ತುಪ್ಪ ಸುರಿದಿರುವ ಸಚಿವ ಸಂಜಯ್ ನಿಶಾದ್ ಹಿಂದಿಯೇತರ ಭಾಷಿಗರನ್ನು ಭಾರತ ಬಿಟ್ಟು ಬೇರೆಡೆಗೆ ತೆರಳಿ ಎಂದು ಹೇಳಿಕೆ ನೀಡುವ ಮೂಲಕ ಕಿಡಿ ಹೊತ್ತಿಸಿದ್ದಾರೆ.
ಹಿಂದೂಸ್ತಾನ್ ಹಿಂದಿ ಭಾಷಿಗರದ್ದು.. ಇದನ್ನು ಒಪ್ಪದಿದ್ದರೆ ಭಾರತ ಬಿಟ್ಟು ತೊಲಗಿ ಎಂದು ಹೇಳಿರುವ ಅವರು, ದಕ್ಷಿಣ ಭಾರತವನ್ನು ಭಾಷೆ ವಿಷಯದಲ್ಲಿ ಮತ್ತೊಮ್ಮೆ ಕೆಣಕಿದ್ದಾರೆ.
ಭಾರತ ‘ಹಿಂದೂಸ್ಥಾನ’ ಎಂದು ನಮ್ಮ ಸಂವಿಧಾನ ಹೇಳುತ್ತದೆ. ಅಂದರೆ, ಹಿಂದಿ ಭಾಷಿಕರ ನಾಡು ಎಂದರ್ಥ. ಹಿಂದೂಸ್ತಾನವು ಹಿಂದಿಯೇತರ ಭಾಷಿಕರ ಸ್ಥಳವಲ್ಲ. ಅವರು ದೇಶ ಬಿಟ್ಟು ಬೇರೆಡೆ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಚಿವರ ಹೇಳಿಕೆಯು ಬಾರೀ ಕೋಲಾಹಲಕ್ಕೆ ಕಾರಣವಾಗಿದ್ದು, ಹಿಂದಿ ಭಾಷೆಯೊಂದಿಗೆ ಜನತೆಯ ಮೇಲೆ ಹೇರಲು ಮುಂದಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.