ತಾಯಿ - ಅಪ್ರಾಪ್ತ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರ: ತಂದೆ-ಪುತ್ರ-ಸ್ನೇಹಿತರಿಬ್ಬರ ಮೇಲೆ ದೂರು ದಾಖಲು
Wednesday, April 20, 2022
ಕನೌಜ್(ಉತ್ತರಪ್ರದೇಶ): ವಿವಾಹವಾಗುವುದಾಗಿ ನಂಬಿಸಿ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸದರ್ ಕೊತ್ವಾಲಿ ಗ್ರಾಮದ ನಿವಾಸಿ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಪುತ್ರಿಯ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ. ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಮಿತ್, ರಾಮ್ ಸಿಂಗ್, ದಿಲೀಪ್ ಮತ್ತು ಪಾವನೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಮೊದಲ ಪತಿಯಿಂದ ಮಹಿಳೆ ವಿಚ್ಛೇದನ ಪಡೆದುಕೊಂಡಿದ್ದಳು. 2020ರಲ್ಲಿ ಆರೋಪಿ ಅಮಿತ್ ಎಂಬಾತನ ಪರಿಚಯವಾಗುತ್ತದೆ. ಆತ ಸಂತ್ರಸ್ತೆಯನ್ನು ಎರಡನೇ ವಿವಾಹ ಮಾಡಿಕೊಳ್ಳುವುದಾಗಿ ಮಾತುಕತೆ ನಡೆಯುತ್ತದೆ.
ಹೀಗಾಗಿ, ಇಬ್ಬರ ನಡುವೆ ಪರಸ್ಪರ ಸಲುಗೆ ಬೆಳೆಯುತ್ತದೆ. ಇದಾದ ಬಳಿಕ ಇಬ್ಬರೂ ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ಮಹಿಳೆ ಅಮಿತ್ ನೊಂದಿಗೆ ಉಳಿದುಕೊಂಡಿದ್ದಾಳೆ. ಈ ವೇಳೆ ಅಮಿತ್ ಹಾಗೂ ಮಹಿಳೆಯ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದೆ.
ಕೆಲ ದಿನಗಳ ಬಳಿಕ, ಅಮಿತ್ ತನ್ನೊಂದಿಗೆ ಮಹಿಳೆ ಹಾಗೂ ಆಕೆಯ ಇಬ್ಬರು ಪುತ್ರಿಯರನ್ನು ನೋಯ್ಡಾಕ್ಕೆ ಕರೆದೊಯ್ದಿದ್ದಾನೆ. ಆದರೆ ಅಲ್ಲಿ ಅಮಿತ್ ಸೇರಿದಂತೆ ಆತನ ತಂದೆ ರಾಮ್ ಸಿಂಗ್ ಹಾಗೂ ಸ್ನೇಹಿತರಾದ ದಿಲೀಪ್ ಮತ್ತು ಪಾವನೇಶ್ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಪುತ್ರಿಯ ಮೇಲೆ ಅನೇಕ ಸಲ ಅತ್ಯಾಚಾರವೆಸಗಿದ್ದಾರೆ. ಸಂತ್ರಸ್ತೆಯರನ್ನು ಬೆದರಿಕೆಯೊಡ್ಡಿ ಅತ್ಯಾಚಾರದ ವೀಡಿಯೋವನ್ನು ಸಹ ಸೆರೆ ಹಿಡಿಯಲಾಗಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಮಾತನಾಡಿ, ಸಂತ್ರಸ್ತೆ ಜನವರಿಯಿಂದ ಮಾರ್ಚ್ವರೆಗೆ ನೋಯ್ಡಾದಲ್ಲಿ ವಾಸವಾಗಿದ್ದಳು. ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪಿಗಳು ಆಕೆಯನ್ನು ವೇಶ್ಯಾವಾಟಿಕೆ ನಡೆಸಲು ಒತ್ತಾಯಿಸಿದ್ದಾರೆ. ಅಲ್ಲದೆ ಆಕೆಯ 15 ವರ್ಷದ ಪುತ್ರಿಗೂ ಚಿತ್ರಹಿಂಸೆ ನೀಡಿದ್ದಾಗಿ ದೂರಿದ್ದಾರೆ.