ಕೆಎಸ್ಆರ್ ಟಿಸಿ ಬಸ್ ಕಿಟಕಿ ತೆರೆಯಲು ಹೇಳಿದ್ದ ವಿದ್ಯಾರ್ಥಿನಿಗೆ ಚಾಲಕ ಮಾಡಿದ್ದೇನು ಗೊತ್ತೇ?
Wednesday, April 20, 2022
ಪತ್ತನಂತಿಟ್ಟ: ಕೆಎಸ್ಆರ್ಟಿಸಿ ಸೂಪರ್ ಡಿಲಕ್ಸ್ ಬಸ್ ಪ್ರಯಾಣದಲ್ಲಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವ ಆರೋಪದ ಮೇಲೆ ಚಾಲಕನ ವಿರುದ್ಧ ದೂರು ದಾಖಲಾಗಿದೆ.
ಈ ಘಟನೆ ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಪತ್ತನಂತಿಟ್ಟ ಡಿಪೋದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೂಪರ್ ಡೀಲಕ್ಸ್ ಬಸ್ಸಿನಲ್ಲಿ ನಡೆದಿದೆ ಎನ್ನಲಾಗಿದೆ. ಸಂತ್ರಸ್ತ ವಿದ್ಯಾರ್ಥಿನಿ ಬೆಂಗಳೂರು ನಿವಾಸಿಯಾಗಿದ್ದಾಳೆ. ಈಕೆ ಈಮೇಲ್ ಮುಖಾಂತರ ಕೇರಳ ಪೊಲೀಸರಿಗೆ ದೂರು ನೀಡಿದ್ದಾಳೆ.
ಸಂತ್ರಸ್ತ ವಿದ್ಯಾರ್ಥಿನಿ ಬಸ್ ನ ಕಿಟಕಿ ತೆರೆಯಲೆಂದು ಚಾಲಕನ ಸಹಾಯ ಕೋರಿದ್ದಾಳೆ. ಆಗ ಆತ ಕಿಟಕಿ ತೆಗೆಯುವ ನೆಪದಲ್ಲಿ ಎಲ್ಲೆಲ್ಲೂ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುವುದ್ದಾನೆ. ಇದರಿಂದ ವಿದ್ಯಾರ್ಥಿನಿ ಗಾಬರಿಯಾಗಿದ್ದಾಳೆ. ಈ ಸಂದರ್ಭ ತಾನು ಅಸಹಾಯಕಳಾಗಿದ್ದೆ. ಚಾಲಕನ ವರ್ತನೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ.
ಇದೀಗ ಚಾಲಕ ಶಾಜಹನ್ ವಿರುದ್ಧ ದೂರು ದಾಖಲಾಗಿದ್ದು, ವಿಜಿಲೆನ್ಸ್ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ಕೃಷ್ಣಗಿರಿ ಸಮೀಪದಲ್ಲಿ ಶನಿವಾರ ಘಟನೆ ನಡೆಯಿತು ಎಂದು ಸಂತ್ರಸ್ತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.