ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರ ನಡುವೆ ಬೀದಿಕಾಳಗ; ವೀಡಿಯೋ ವೈರಲ್
Tuesday, April 5, 2022
ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರಿಬ್ಬರ ನಡುವೆ ಮಾರಾಮಾರಿ ನಡೆದಿರುವ ವೀಡಿಯೋ ಒಂದು ವೈರಲ್ ಆಗಿದೆ.
ನಗರದ ಬಾವುಟಗುಡ್ಡೆಯಲ್ಲಿರುವ ಎನ್ ಕೆಫೆ ಹೊಟೇಲ್ ನಲ್ಲಿ ಈ ಮಾರಾಮಾರಿ ನಿನ್ನೆ ಸಂಜೆ ನಡೆದಿತ್ತು ಎನ್ನಲಾಗಿದೆ. ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರ ನಡುವೆ ನಿನ್ನೆ ಸಂಜೆ ಹೊಟೇಲ್ ನಲ್ಲಿ ಮಾರಾಮಾರಿ ನಡೆದಿತ್ತು. ಯುವಕರ ಜೊತೆಯಲ್ಲಿ ಕುಳಿತಿದ್ದ ಪದವಿ ಕಾಲೇಜಿನ ವಿದ್ಯಾರ್ಥಿನಿಗೆ ಏಕಾಏಕಿ ಮತ್ತೊಬ್ಬ ವಿದ್ಯಾರ್ಥಿನಿ ಬಂದು ಹಲ್ಲೆ ನಡೆಸಿದ್ದಳು. ಆಗ ಇಬ್ಬರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಯುವತಿಯರ ಮಾರಾಮಾರಿಯನ್ನು ಬಿಡಿಸಲು ಹೋಗಿ ವಿದ್ಯಾರ್ಥಿ ಹೈರಾಣಾಗಿರೋದು ವೀಡಿಯೋದಲ್ಲಿ ದಾಖಲಾಗಿದೆ. ಆದರೆ ವಿದ್ಯಾರ್ಥಿನಿಯರಿಗೆ ಯಾವ ವಿಚಾರಕ್ಕೆ ವೈಷಮ್ಯಕ್ಕೆ ಬೆಳೆದಿದೆ ಎಂದು ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನೂ ಪೊಲೀಸ್ ದೂರು ದಾಖಲಾಗಿಲ್ಲ