ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪತ್ನಿ: ಬಂಧನದ ಭೀತಿಯಲ್ಲಿದ್ದ ಪತಿ ನೇಣಿಗೆ ಶರಣು
Friday, April 8, 2022
ಯಳಂದೂರು: ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ಕೊಟ್ಟಿದ್ದರಿಂದ ಬಂಧನದ ಭೀತಿಯಲ್ಲಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೊಳ್ಳೇಗಾಲದ ಸೈಯ್ಯದ್ ಇರ್ಫಾನ್(47)ಮೃತ ದುರ್ದೈವಿ. ಈತನ ಪತ್ನಿ ಆಸಿಯಾ ತಾಜ್, ಪತಿ ಕಿರುಕುಳ ನೀಡುತ್ತಿದ್ದಾನೆಂದು ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಪರಿಣಾಮ ಪೊಲೀಸರು ತನ್ನನ್ನು ಬಂಧಿಸಬಹುದೆಂದು ಭೀತಿಗೊಳಗಾಗಿದ್ದ ಸೈಯ್ಯದ್ ಇರ್ಫಾನ್ ತಲೆ ಮರೆಸಿಕೊಂಡಿದ್ದ. ಇದೀಗ ಆತ ಯಳಂದೂರಿನ ಮಾಂಬಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಎ.6ರಂದು ನೇಣಿಗೆ ಶರಣಾಗಿದ್ದಾನೆ. ತನ್ನ ಪತಿ ಇರ್ಫಾನ್ ಹಾಗೂ ಆತನ ಸಹೋದರಿ ಮತ್ತು ಆಕೆಯ ಪತಿ ಸೇರಿಕೊಂಡು ತನಗೆ ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಆಸಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಆಕೆ ಈ ಮೂವರ ವಿರುದ್ಧ ಪೊಲೀಸ್ ದೂರು ನೀಡಿದ್ದಳು.