ಮಂಗಳೂರು: ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ
Monday, April 11, 2022
ಮಂಗಳೂರು: ಸಾಲ ತೀರಿಸಲಾಗದೆ ಮನನೊಂದ ಯುವಕನೋರ್ವನು ಎನ್ಐಟಿಕೆ ಬಳಿಯ ಮಲ್ಲಮ್ಮಾರ್ ಬೀಚ್ ಬಳಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸುರತ್ಕಲ್ ಆಶ್ರಯ ಕಾಲನಿ ಮೂರನೇ ಬ್ಲಾಕ್ ನಿವಾಸಿ ಕ್ಯಾಂಡ್ರಿಕ್ ಲಾರೆನ್ಸ್ ಡಿಸೋಜ ಆತ್ಮಹತ್ಯೆ ಮಾಡಿಕೊಂಡಾತ
ಕ್ಯಾಂಡ್ರಿಕ್ ಲಾರೆನ್ಸ್ ಡಿಸೋಜ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಮಲ್ಲಮ್ಮಾರ್ ಎಂಬಲ್ಲಿ ಸಮುದ್ರಕ್ಕೆ ಹಾರಿ ಮೃತಪಟ್ಟಿದ್ದಾನೆ. ''ಈ ಆತ್ಮಹತ್ಯೆಗೆ ತಾನೇ ಕಾರಣ. ಬಹಳಷ್ಟು ಮಂದಿಯಿಂದ ಸಾಲ ಪಡೆದುಕೊಂಡಿದ್ದೇನೆ. ಆದರೆ ಇದೀಗ ಈ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ" ಎಂದು ಡೆತ್ ನೋಟ್ ಬರೆದಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.