ಮಾಜಿ ಶಾಸಕನ ಪುತ್ರಿ ಎಂಬಿಬಿಎಸ್ ವಿದ್ಯಾರ್ಥಿನಿ ನೇಣಿಗೆ ಶರಣು... ಕಾರಣ ನಿಗೂಢ!
Thursday, April 14, 2022
ಭದ್ರಾದ್ರಿ ಕೊತಗುಡೆಂ(ತೆಲಂಗಾಣ): ಅಶ್ವಾರಾವುಪೇಟೆಯ ಮಾಜಿ ಶಾಸಕ ತಾಟಿ ವೆಂಕಟೇಶ್ವರ್ಲು ಅವರ ಪುತ್ರಿ ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಸುದ್ದಿ ತಿಳಿದಾಕ್ಷಣ ಮನೆಗೆ ದೌಡಾಯಿಸಿದ ತಾಟಿ ವೆಂಕಟೇಶ್ವರ್ಲು ಮೌನಕ್ಕೆ ಶರಣಾದರು.
ಎಂಬಿಬಿಎಸ್ ಶಿಕ್ಷಣ ಮುಗಿಸಿರುವ ತಾಟಿ ಮಹಾಲಕ್ಷ್ಮಿ(26) ಬೂರ್ಗಂಪಾಡು ತಾಲೂಕಿನ ಸಾರಾಪಾಕ ಗ್ರಾಮದ ನಿವಾಸಿಯಾಗಿದ್ದರು. ಅಲ್ಲದೆ ಆಕೆ ಮುಂದಿನ ವಿದ್ಯಾಭ್ಯಾಸಕ್ಕೆ ತಯಾರಿ ನಡೆಸುತ್ತಿದ್ದರು. ಆದರೆ ಏನಾಗಿದೆಯೋ ಗೊತ್ತಿಲ್ಲ ಏನೋ ಇಂದು ಮುಂಜಾನೆ ಮಹಾಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ದಮ್ಮಪೇಟದ ಮನೆಯಲ್ಲಿದ್ದ ವೆಂಕಟೇಶ್ವರ್ಲು ಸಾರಪಾಕ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಪುತ್ರಿಯ ಮೃತದೇಹವನ್ನು ನೋಡಿದ ಅವರ ರೋದನೆ ಮುಗಿಲು ಮುಟ್ಟಿತ್ತು. ಬಳಿಕ ಸ್ಥಳಕ್ಕಾಗಿಮಿಸಿದ್ದ ಪೊಲೀಸರು ಮಹಾಲಕ್ಷ್ಮಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಈ ಘಟನೆ ಕುರಿತು ಬೂರ್ಗಂಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ತನಿಖೆ ಕೈಗೊಂಡಿದ್ದಾರೆ.