ಪರೀಕ್ಷೆಯ ದಿನಾಂಕ ಮರೆತು ಹೋಗಿದ್ದರಿಂದಲೇ ಈ ಬಾಲಕಿಯ ಆತ್ಮಹತ್ಯೆ ನಡೆಯಿತೇ?
Sunday, April 10, 2022
ನೆಲಮಂಗಲ: 15ರ ಬಾಲೆಯೊಬ್ಬಳು ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡಿರುವ ದುರಂತವೊಂದು ಬೆಂಗಳೂರು ಉತ್ತರ ತಾಲೂಕಿನಲ್ಲಿ ನಡೆದಿದೆ. ಬೆಂಗಳೂರು
ಬೆಂಗಳೂರು ಉತ್ತರ ತಾಲೂಕು ಸಿದ್ದನಹೊಸಹಳ್ಳಿ ಗ್ರಾಮ ನಿವಾಸಿ ಪ್ರೀತಿ (15) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
ಪ್ರೀತಿ ಹಿರಿಯೂರು ಮೂಲದ ವೆಂಕಟೇಶ್ ಎಂಬವರು ಪುತ್ರಿ. ಇವಳು ಚಿಕ್ಕಬಿದರಕಲ್ಲು ಶಾಲೆಯಲ್ಲಿ ಎಸ್ಎಸ್ಎಲ್ ಸಿ ಮಾಡುತ್ತಿದ್ದಳು. ‘ನನ್ನ ಸಾವಿಗೆ ಯಾರೂ ಕಾರಣವಲ್ಲ, ಐ ಯಾಮ್ ಸಾರಿ ಅಪ್ಪ, ನನ್ನನ್ನು ಕ್ಷಮಿಸಿ..’ ಎಂದು ಡೆತ್ನೋಟ್ ಬರೆದಿಟ್ಟು, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಗೆ ಪರೀಕ್ಷೆಯ ದಿನಾಂಕ ಮರೆತು ಹೋಗಿರುವ ಹಿನ್ನಲೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದಾಳೆ ಎಂದು ಎನ್ನಲಾಗುತ್ತಿದ್ದರೂ, ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.
ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.