ಉಡುಪಿ: ಕಿಟಕಿಯಿಂದಲೇ ಲಕ್ಷಾಂತರ ರೂ. ಚಿನ್ನಾಭರಣ ಕದ್ದ ಖದೀಮ ಕಳ್ಳ ಸೆರೆ
Tuesday, April 19, 2022
ಉಡುಪಿ: ಕಿಟಕಿಯ ಮೂಲಕವೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀಮ ಕಳ್ಳನೋರ್ವನನ್ನು ಉಡುಪಿ ಪೊಲೀಸರು ಕುಕ್ಕಿಕಟ್ಟೆ ರೈಲ್ವೇ ಸೇತುವೆ ಬಳಿ ಬಂಧಿಸಿದ್ದಾರೆ.
ಇಂದ್ರಾಳಿ ಮಂಚಿಕೆರೆಯ ದುರ್ಗಾನಗರ ನಿವಾಸಿ ಗುರುರಾಜ್ ನಾಯ್ಕ್(35) ಬಂಧಿತ ಆರೋಪಿ.
ಗುರುರಾಜ್ ನಾಯ್ಕ್ ಮಾ.25ರಂದು ರಾತ್ರಿ ಗುಂಡಿಬೈಲು ಪಾಡಿಗಾರ ರಸ್ತೆಯ ಸುನೀತಾ ಎಂಬವರ ಮನೆಯ ಸಮೀಪ ಬಂದಿದ್ದಾನೆ. ಈ ಸಂದರ್ಭ ಅವರು ಮನೆಯ ಹಾಲ್ ನಲ್ಲಿಟ್ಟಿದ್ದ 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಗಮನಿಸಿದ್ದಾನೆ. ಆತ ಅದನ್ನು ಕಿಟಕಿಯ ಮೂಲಕವೇ ಕಳವುಗೈದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ಸಂದರ್ಭ ಆರೋಪಿ ಉಡುಪಿ ಪೊಲೀಸರು ಕುಕ್ಕಿಕಟ್ಟೆ ರೈಲ್ವೇ ಸೇತುವೆ ಬಳಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಳವಾಗಿದ್ದ ಚಿನ್ನಾಭರಣಗಳ ಸಹಿತ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಸ್ಕೂಟರ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.