-->
ಕೇವಲ‌ ಒಂದು ಟ್ವೀಟ್ ನಿಂದ ಸಿಕ್ಕಿತು ಫುಡ್ ಡೆಲಿವರಿ ಮಾಡುತ್ತಿದ್ದಾತನಿಗೆ ಬೈಕ್ ಉಡುಗೊರೆ

ಕೇವಲ‌ ಒಂದು ಟ್ವೀಟ್ ನಿಂದ ಸಿಕ್ಕಿತು ಫುಡ್ ಡೆಲಿವರಿ ಮಾಡುತ್ತಿದ್ದಾತನಿಗೆ ಬೈಕ್ ಉಡುಗೊರೆ

ಜೈಪುರ: ದಿನನಿತ್ಯ ಸೈಕಲ್​ ನಲ್ಲಿ ಫುಡ್​ ಡೆಲಿವರಿ ಮಾಡುತ್ತಿದ್ದ ವ್ಯಕ್ತಿಗೆ ಕೇವಲ ಒಂದೇ ಒಂದು ಟ್ವೀಟ್ ಬೈಕ್​ ಉಡುಗೊರೆಯಾಗಿ ದೊರಕುವಂತೆ ಮಾಡಿದೆ. 

ರಾಜಸ್ಥಾನದಲ್ಲಿ ಬಿರು ಬಿಸಿಲಿರುವುದರಿಂದ ಹೊರ ಬರಲು ಆಗದೆ ಆದಿತ್ಯ ಶರ್ಮಾ ಎಂಬುವವರು ಹೊಟೇಲ್ ನಿಂದ ಫುಡ್​​ ಆರ್ಡರ್ ಮಾಡಿದ್ದರು. ದುರ್ಗಾ ಮೀನಾ(31) ಯುವಕ ಸೈಕಲ್​ನಲ್ಲಿ ಅವರಿಗೆ ಫುಡ್​ ಡೆಲಿವರಿ ಮಾಡಿದ್ದರು. 'ಇಷ್ಟೊಂದು ಬಿರುಬಿಸಿಲಿನಲ್ಲಿ ಈ ವ್ಯಕ್ತಿ ಸೈಕಲ್​ ಮೂಲಕವೇ ಫುಡ್ ಡೆಲಿವರಿ ಮಾಡಿದ್ದರು. ಇವರಿಗೊಂದು ಬೈಕ್​ ಇದ್ದಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಆದಿತ್ಯ ಶರ್ಮಾ ಟ್ವೀಟ್ ಮಾಡಿದ್ದರು.  ಅವರು ಮಾಡಿರುವ ಒಂದೇ ಒಂದು ಟ್ವಿಟ್​​ ದುರ್ಗಾ ಮೀನಾ ಎಂಬಾತನ ಬದುಕನ್ನೇ ಬದಲಾಯಿಸಿದೆ. 

ಸೈಕಲ್​ ತುಳಿದುಕೊಂಡೇ ದುರ್ಗಾ ಮೀನಾ ಫುಡ್ ಡೆಲಿವರಿ ಮಾಡಿಕೊಂಡು ತಿಂಗಳಿಗೆ ಕೇವಲ 10 ಸಾವಿರ ರೂ. ಮಾತ್ರ ಗಳಿಸುತ್ತಿದ್ದರು. ಇದೀಗ ಇವರಿಗೆ ಬೈಕ್​ ಉಡುಗೊರೆಯಾಗಿ ದೊರೆತಿದೆ. ಈ ಮೂಲಕ ಅವರಿಗೆ ಹೆಚ್ಚು ಹೆಚ್ಚು ಫುಡ್ ಡೆಲಿವರಿ ಮಾಡಿ ಅಧಿಕ ಹಣ ಗಳಿಸಲು ಸಹಾಯವಾಗಿದೆ. 

Ads on article

Advertise in articles 1

advertising articles 2

Advertise under the article