ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಎಸಗಿದ ವಿದ್ಯಾರ್ಥಿ: ಟ್ಯೂಷನ್ ಶಿಕ್ಷಕಿಯ ಬೆತ್ತಲೆ ದೃಶ್ಯ ಸೆರೆ!
Wednesday, April 6, 2022
ಮುಂಬೈ: ಮಹಾರಾಷ್ಟ್ರದಲ್ಲಿ 15 ವರ್ಷದ ಬಾಲಕ ಮಾಡಿರುವ ಕೃತ್ಯ ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎನ್ನುವ ಆತಂಕ ಮೂಡಿಸುವಂತಾಗಿದೆ. 'ಗುರು ದೇವೋಭವ' ಎಂದು ಗುರುವಿಗೆ ದೇವರ ಸ್ಥಾನ ನೀಡಿರುವ ನಮ್ಮ ದೇಶದಲ್ಲಿ ಮಹಾರಾಷ್ಟ್ರದ ವಿದ್ಯಾರ್ಥಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾನೆ. ಈತ ತನ್ನ ಟ್ಯೂಷನ್ ಶಿಕ್ಷಕಿಯ ಬೆತ್ತಲೆ ವೀಡಿಯೋ ಸೆರೆಹಿಡಿದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದಾನೆ.
56 ವರ್ಷದ ಸಂತ್ರಸ್ತ ಶಿಕ್ಷಕಿಯು 16 ವರ್ಷದ ಆರೋಪಿ ವಿದ್ಯಾರ್ಥಿಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು. ಪ್ರತಿದಿನವೂ ಶಿಕ್ಷಕಿ ಟ್ಯೂಷನ್ ನೀಡಲೆಂದು ವಿದ್ಯಾರ್ಥಿ ಮನೆಗೆ ಬರುತ್ತಿದ್ದರು. ಅದರಂತೆಯೇ ಆಗಮನದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿ ತನ್ನ ಸ್ವಂತ ಮನೆಯ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಅಳವಡಿಸಿದ್ದಾನೆ. ಸ್ನಾನಗೃಹದಲ್ಲಿ ಬಚ್ಚಿಟ್ಟಿರುವ ಮೊಬೈಲ್ ಫೋನ್ ಅನ್ನು ಪತ್ತೆ ಮಾಡಿರುವ ಶಿಕ್ಷಕಿ, ಅದನ್ನು ಅನ್ಲಾಕ್ ಮಾಡಿದಾಗ ತನ್ನ ನಗ್ನ ದೃಶ್ಯಗಳಿರುವುದನ್ನು ಪತ್ತೆ ಮಾಡಿದ್ದಾರೆ. ವಿದ್ಯಾರ್ಥಿಯೇ ವೀಡಿಯೋ ರೆಕಾರ್ಡ್ ಮಾಡಿದ್ದನ್ನು ಅರಿತ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೋಗ ಪೊಲೀಸರು ತನಿಖೆ ಆರಂಭಿಸಿದ್ದು, ನಗ್ನ ವೀಡಿಯೋ ಇರುವ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪರೀಕ್ಷೆ ನಡೆಯುತ್ತಿರುವುದರಿಂದ ಪೊಲೀಸರು ವಿದ್ಯಾರ್ಥಿಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಘಟನೆಯ ಕುರಿತು ಬಾಲ ನ್ಯಾಯ ಮಂಡಳಿಗೆ ದೂರು ನೀಡಲಾಗಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.