-->
ಸಂಚರಿಸುತ್ತಿದ್ದ ಬೈಕ್ ನಲ್ಲಿಯೇ ಪ್ರೇಮಿಗಳಿಬ್ಬರ ಲಿಪ್ ಲಾಕ್ ರೊಮ್ಯಾನ್ಸ್: ಜೋಡಿಯ ಅತಿರೇಕದ ಹುಚ್ಚಾಟ ಸಾರ್ವಜನಿಕರಿಂದ ಆಕ್ರೋಶ

ಸಂಚರಿಸುತ್ತಿದ್ದ ಬೈಕ್ ನಲ್ಲಿಯೇ ಪ್ರೇಮಿಗಳಿಬ್ಬರ ಲಿಪ್ ಲಾಕ್ ರೊಮ್ಯಾನ್ಸ್: ಜೋಡಿಯ ಅತಿರೇಕದ ಹುಚ್ಚಾಟ ಸಾರ್ವಜನಿಕರಿಂದ ಆಕ್ರೋಶ

ಚಾಮರಾಜನಗರ: ಪ್ರೇಮಿಗಳಿಬ್ಬರ ಅತಿರೇಕದ ಹುಚ್ಚಾಟದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಬೈಕ್​ ಪೆಟ್ರೋಲ್ ಟ್ಯಾಂಕ್ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡಿರುವ ಬಾಯ್​ಫ್ರೆಂಡ್​ ಜಾಲಿ ರೈಡ್ ನೊಂದಿಗೆ ರೊಮ್ಯಾನ್ಸ್​ ಮಾಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಸಾರ್ವಜನಿಕ ಸ್ಥಳದಲ್ಲಿ ಬೈಕ್​ ನಲ್ಲಿ ಸಂಚಾರ ಮಾಡುತ್ತಿರುವಾಗಲೇ ತಬ್ಬಿಕೊಂಡು ಪರಸ್ಪರ ಚುಂಬಿಸುವ ಮೂಲಕ ಈ ಪ್ರೇಮಿಗಳು ಅಶಿಸ್ತನ್ನು ಮೆರೆದಿದ್ದಾರೆ. ಮಾರ್ಗದಲ್ಲಿ ಜನ ಓಡಾಟವಿದ್ದರೂ, ರಸ್ತೆಯಲ್ಲಿ ವಾಹನಗಳ ಸಂಚಾರವಿದ್ದರೂ ಇದಕ್ಕೆಲ್ಲಾ ಡೋಂಟ್ ಕೇರ್ ಎನ್ನದ ಈ ಜೋಡಿ ಹಾಡಹಗಲೇ ಬೈಕ್​ ಸವಾರಿ ಮಾಡುತ್ತಲೇ ಮೇಲೆ ಚೆಲ್ಲಾಟ ಆಡಿದ್ದಾರೆ. 

ಚಲಿಸುವ ಬೈಕ್​ ಮೇಲೆಯೇ ಪರಸ್ಪರ ಲಿಪ್​ಲಾಕ್​ ಮಾಡುವ ಮೂಲಕ ರೊಮ್ಯಾನ್ಸ್​ ಮಾಡಿದ್ದಾರೆ. ಈ ದೃಶ್ಯವನ್ನು ಹಿಂಬದಿಯ ಸವಾರರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಪ್ರೇಮಿಗಳ ಈ ಹುಚ್ಚಾಟವನ್ನು ನೋಡಿದ ಸಾರ್ವಜನಿಕರು ದಿಗ್ಭ್ರಮೆಗೊಂಡಿದ್ದಾರೆ. ಜನರನ್ನೂ ಲೆಕ್ಕಿಸದೆ ಕಿಲೋ ಮೀಟರ್​ಗಟ್ಟಲೆ ಈ ಪ್ರೇಮಿಗಳು ಬೈಕ್​ ಮೇಲೆ ಚೆಲ್ಲಾಟ ಆಡಿದ್ದಾರೆ. ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಪ್ರಿಯಕರನನ್ನು ಬಿಗಿದಪ್ಪಿಕೊಂಡು ಸಾಗುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ಪ್ರೇಮಿಗಳ ಈ ಹುಚ್ಚಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. 

Ads on article

Advertise in articles 1

advertising articles 2

Advertise under the article