ಡಿಯೋ ಫಾಲೋ ಮಾಡಿಕೊಂಡು ಬಂದ ಖದೀಮ ಕಳ್ಳರು 7ಲಕ್ಷ ರೂ. ಎಗರಿಸಿ ಪರಾರಿಯಾದರು
Tuesday, May 31, 2022
ಚಿಕ್ಕಬಳ್ಳಾಪುರ: ಖದೀಮ ಕಳ್ಳರು ಡಿಯೋವೊಂದನ್ನು ಫಾಲೋ ಮಾಡಿಕೊಂಡು ಬಂದು ಅದರೊಳಗೆ ಇಟ್ಟಿರುವ 7 ಲಕ್ಷ ರೂ.ವನ್ನು ಎಗರಿಸಿ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದ ಸಂತೆ ಮಾರ್ಕೆಟ್ ನಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ನಂದಿ ಗ್ರಾಮ ನಿವಾಸಿ ಮಂಜುನಾಥ 7ಲಕ್ಷ ರೂ. ಕಳೆದುಕೊಂಡಿದ್ದಾರೆ. ಬ್ಯಾಂಕ್ ನಿಂದ 7ಲಕ್ಷ ರೂ. ಡ್ರಾ ಮಾಡಿರುವ ಮಂಜುನಾಥ ರೇಷನ್ ಕೊಳ್ಳಲೆಂದು ಸಂತೆ ಮಾರ್ಕೆಟ್ ಗೆ ಬಂದಿದ್ದರು. ಅವರು ತಮ್ಮ ಡಿಯೋ ವಾಹನವನ್ನು ಪಾರ್ಕ್ ಮಾಡಿ ರೇಷನ್ ಕೊಳ್ಳಲೆಂದು ಹೋಗಿದ್ದರು.
ಈ ವೇಳೆ ಅವರ ಡಿಯೋ ವಾಹನವನ್ನು ಫಾಲೋ ಮಾಡಿಕೊಂಡು ಬಂದಿರುವ ಖದೀಮ ಕಳ್ಳರು ತಮ್ಮ ಕೈಚಳಕ ತೋರಿಸಿ 7ಲಕ್ಷ ರೂ. ಎಗರಿಸಿದ್ದಾರೆ. ಕಳ್ಳರು ತಮ್ಮ ಕೈಚಳಕ ತೋರಿಸುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಕ್ಷಣ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.