ಮದುವೆ ದಿಬ್ಬಣದ ವಾಹನ - ಕಾರು ಮುಖಾಮುಖಿ ಢಿಕ್ಕಿ: ಕಾಂಗ್ರೆಸ್ ಮುಖಂಡ ದುರ್ಮರಣ, 8ಕ್ಕೂ ಅಧಿಕ ಮಂದಿ ಗಾಯ
Monday, May 23, 2022
ಕಾರವಾರ(ಉತ್ತರ ಕನ್ನಡ): ಮದುವೆ ದಿಬ್ಬಣಕ್ಕೆಂದು ಬಂದಿದ್ದವರನ್ನು ಮರಳಿ ಬಿಡಲು ಹೋಗುತ್ತಿದ್ದ ವಾಹನ ಹಾಗೂ ಕಾರೊಂದು ಮುಖಾಮುಖಿಯಾಗಿ ಡಿಕ್ಕಿಯಾದ ಕಾಂಗ್ರೆಸ್ ಮುಖಂಡ ಸ್ಥಳದಲ್ಲಿಯೇ ಮೃತಪಟ್ಟು, 8ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಸಿದ್ದಾಪುರ ತಾಲೂಕಿನ ಶಿರೂರು ಬಳಿ ನಡೆದಿದೆ.
ಸಿದ್ದಾಪುರ ತಾಲೂಕಿನ ನಿಲ್ಕುಂದ ಪಂಚಾಯತ್ ನ ಮಾಜಿ ಸದಸ್ಯ ಮತ್ತು ಕಾಂಗ್ರೆಸ್ ಘಟಕ ಅಧ್ಯಕ್ಷರಾಗಿದ್ದ ಮಂಜುನಾಥ ಬಿ. ಗೌಡ ಕಬ್ಬಿನ್ಮನೆ ಅಪಘಾತದಲ್ಲಿ ಮೃತಪಟ್ಟವರು. ಮದುವೆ ಮುಗಿಸಿ ದಿಬ್ಬಣದಲ್ಲಿ ಬಂದಿದ್ದವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಈ ಅಪಘಾತದಲ್ಲಿ ಎರಡು ವಾಹನಗಳಲ್ಲಿದ್ದ 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.