ಮಲ್ಪೆಯಲ್ಲಿ ಟ್ಯಾಂಕರ್ - ರಿಕ್ಷಾ ಅಪಘಾತ: ವಿದೇಶೀ ದಂಪತಿ, ರಿಕ್ಷಾ ಚಾಲಕನಿಗೆ ಗಾಯ
Thursday, May 19, 2022
ಉಡುಪಿ: ಟ್ಯಾಂಕರ್ - ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ವಿದೇಶಿ ದಂಪತಿ ಸಹಿತ ಮೂವರು ಗಾಯಗೊಂಡ ಘಟನೆ ನಿನ್ನೆ ಮಲ್ಪೆ ಸಿಟಿಜನ್ ಸರ್ಕಲ್ ಬಳಿ ನಡೆದಿದೆ.
ಪ್ರಾನ್ಸ್ ದೇಶದ ನಿವಾಸಿ ಗ್ರೆಗೋರ್ ರಿಕೋನ್(32), ಅವರ ಪತ್ನಿ
ಮಾರ್ಗೊಟ್ ಕ್ವಿಝ್ ನೆಲ್ ಹಾಗೂ ರಿಕ್ಷಾ ಚಾಲಕ ಅತ್ರಾಡಿ ನಿವಾಸಿ ಪ್ರಜ್ವಲ್ ಎಂಬವರು ಗಾಯಗೊಂಡವರು.
ಮದುವೆ ಸಮಾರಂಭಕ್ಕೆಂದು ಭಾರತಕ್ಕೆ ಆಗಮಿಸಿದ್ದ ಈ ವಿದೇಶಿ ದಂಪತಿ ಮಣಿಪಾಲದಲ್ಲಿ ರಿಕ್ಷಾ ಮೂಲಕ ಮಲ್ಪೆ ಬೀಚ್ ಗೆ ತೆರಳುತ್ತಿದ್ದರು. ಈ ಸಂದರ್ಭ ನೀರು ಸರಬರಾಜಿನ ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ರಿಕ್ಷಾ ಚಾಲಕ ಸೇರಿ ಪ್ರಯಾಣಿಕರಾದ ವಿದೇಶಿ ದಂಪತಿ ಗಾಯಗೊಂಡಿದ್ದಾರೆ. ಮೂವರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.