ಶಾಲೆಯಿಂದ ಮನೆಗೆ ಹೊರಟಿದ್ದ ಬಾಲಕಿಯರಿಬ್ಬರು ಕಾರು ಅಪಘಾತಕ್ಕೆ ಬಲಿ: ಮೂವರು ಗಂಭೀರ
Thursday, May 26, 2022
ಬಾಗಲಕೋಟೆ: ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ವಿದ್ಯಾರ್ಥಿಗಳಿಗೆ ಕಾರು ಅಪಘಾತಗೊಂಡು ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬಾಗಲಕೋಟೆಯ ಹುನಗುಂದ ತಾಲೂಕಿನ ಐಹೊಳೆ ಸಮೀಪದ ಕ್ಯಾದಿಗಿ ಕ್ರಾಸ್ ಬಳಿನಡೆದಿದೆ.
ನೇತ್ರಾವತಿ ರಗಟಿ( 14), ಅಂಜಲಿ ಸೂಡಿ ಮೃತಪಟ್ಟ ಬಾಲಕಿಯರು.
ಬಾಲಕಿಯರು ಶಾಲೆ ಮುಗಿಸಿ ಐಹೊಳೆಯಿಂದ ಚಿಲ್ಲಾಪುರದ ಕಡೆಗೆ ಹೊರಟಿದ್ದರು. ಆಗ ಮುಂಭಾಗದಿಂದ ಬರುತ್ತಿದ್ದ ಕಾರು ದುರಂತಕ್ಕೆ ಕಾರಣವಾಗಿದೆ. ಅಪಘಾತದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕಾರು ಸಂತೋಷ್ ಅಮರಿ ಎಂಬಾತನ ಹೆಸರಿನಲ್ಲಿದೆ. ಸ್ಥಳಕ್ಕೆ ಅಮೀನಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.