ಮಂಗಳೂರು: ಸ್ಕೂಟರ್ ಅಪಘಾತದ ಸವಾರರಿಬ್ಬರಿಗೆ ಗಂಭೀರ ಗಾಯ: ಘಟನೆಯ ಭೀಕರ ದೃಶ್ಯ ವೀಡಿಯೋದಲ್ಲಿ ಸೆರೆ
Monday, May 30, 2022
ಮಂಗಳೂರು: ಅತೀ ವೇಗದಿಂದ ಸವಾರಿ ಮಾಡಿಕೊಂಡು ಬಂದಿದ್ದ ಸ್ಕೂಟರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಿಕರ್ನಕಟ್ಟೆಯಲ್ಲಿ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಮೇ 29ರಂದು ನಸುಕಿನ ವೇಳೆ 2.15ರ ಈ ದುರ್ಘಟನೆ ನಡೆದಿದೆ. ವೇಗವಾಗಿ ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿವೈಡರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಲ್ಲಿ ಸವಾರಿ ಮಾಡಿಕೊಂಡು ಬಂದಿದ್ದ ಗಣೇಶ್ ಹಾಗೂ ಧೀರಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅಲ್ಲಿಂದಲೇ ಹೋಗುತ್ತಿದ್ದ ಆಟೋ ರಿಕ್ಷಾ ಚಾಲಕರೋರ್ವರು ಇದನ್ನು ಗಮನಿಸಿ ಗಾಯಾಳುಗಳನ್ನು ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಸಂಚಾರ ಪೊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.