ನಟ ಅನಿರುದ್ಧ್ ರಿಂದ ಪ್ರಧಾನಿ ಮೋದಿಗೆ ಪತ್ರ: ಏನು ಬರೆದಿದ್ದಾರೆ ಗೊತ್ತೇ?
Thursday, May 26, 2022
ಬೆಂಗಳೂರು: ತಮ್ಮ ಜೊತೆಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ಅನಿರುದ್ಧ್ ಅವರು, ಬೆಂಗಳೂರು ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಸುದ್ದಿಯಾಗಿದ್ದಾರೆ. ಆಗಾಗ ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಸದ್ದು ಮಾಡುತ್ತಿರುವ ಅನಿರುದ್ಧ್ ಅವರು ಈ ಪತ್ರದಲ್ಲಿ ಬ್ರ್ಯಾಂಡ್ ಬೆಂಗಳೂರನ್ನು ಉಳಿಸುವಂತೆ ಪತ್ರ ಬರೆದಿದ್ದಾರೆ.
ಐಟಿ ಹಬ್ , ಗ್ರೀನ್ ಸಿಟಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಇದೀಗ ಅವ್ಯವಸ್ಥೆಗಳ ಆಗರವಾಗಿದೆ. ಬೆಂಗಳೂರಿನ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ಇಲಾಖೆ ರಚಿಸಬೇಕು. ರಾಜ್ಯಕ್ಕೆ ಈ ಬಗ್ಗೆ ತಕ್ಷಣ ಆದೇಶ ಹೊರಡಿಸಬೇಕು. ರಾಜ್ಯದ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಬೆಂಗಳೂರು ಇನ್ನೂ ಸ್ವಚ್ಛನಗರವಾಗಲು ಸಾಧ್ಯ. ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಆದಷ್ಟು ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಪತ್ರ ಮುಖೇನ ಮೋದಿಯವರಲ್ಲಿ ವಿನಂತಿಸಿದ್ದಾರೆ.
ಇದಲ್ಲದೆ ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ, ಹೂಳು ತುಂಬಿದ ಕೆರೆ, ಮರಗಳ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ತಂತಿ, ಭಿತ್ತಿ ಪತ್ರ ಅಂಟಿಸುವಿಕೆ, ನಾದುರಸ್ತಿಯಲ್ಲಿರುವ ಫುಟ್ ಪಾತ್ ಹೀಗೆ ಹಲವಾರು ವಿಚಾರಗಳ ಬಗ್ಗೆ ಸಮಸ್ಯೆಗಳನ್ನು ಹೇಳಿದ್ದಾರೆ.