ತಡರಾತ್ರಿ ಪತಿ, ಮಕ್ಕಳೊಂದಿಗೆ ರೈಲಿಗಾಗಿ ಕಾಯುತ್ತಿದ್ದ ಗರ್ಭಿಣಿಯನ್ನು ಅಪಹರಿಸಿ ಅತ್ಯಾಚಾರ: ಮೂವರು ಕಾಮುಕರ ಬಂಧನ
Tuesday, May 3, 2022
ಹೈದರಾಬಾದ್: ತಡರಾತ್ರಿ ಪತಿ ಹಾಗೂ ಮಕ್ಕಳೊಂದಿಗೆ ರೈಲಿಗಾಗಿ ಕಾಯುತ್ತಿದ್ದ ಗರ್ಭಿಣಿ ಮಹಿಳೆಯನ್ನು ಮೂವರು ಕಾಮುಕರು ಅಪಹರಿಸಿ ರೈಲು ನಿಲ್ದಾಣದ ಸಮೀಪ ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಈ ಘಟನೆಯು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸಲು ಯತ್ನಿಸಿದ ಸಂದರ್ಭ ಬೊಬ್ಬೆ ಹಾಕಿರುವ ಹಾಗೂ ರೈಲ್ವೇ ಪೊಲೀಸರ ನೆರವು ಪಡೆಯಲು ಪ್ರಯತ್ನಿಸಿದ ಪತಿಗೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಥಳಿಸಿದ್ದಾರೆ. ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕನನ್ನು ಸೇರಿದಂತೆ ಎಲ್ಲಾ ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕಾಶಂ ಜಿಲ್ಲೆಯ ಈ ಕುಟುಂಬ ಕೆಲಸ ಹುಡುಕಿಕೊಂಡು ಗುಂಟೂರು ಜಿಲ್ಲೆಯಿಂದ ಕೃಷ್ಣಾ ಜಿಲ್ಲೆಯತ್ತ ತೆರಳುತ್ತಿತ್ತು. ಈ ಸಂದರ್ಭ ರೈಲಿಗಾಗಿ ರೈಲು ನಿಲ್ದಾಣದಲ್ಲಿ ಕಾಯುತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.