ಉಪ್ಪಿನಂಗಡಿ: ಮಹಿಳೆಯನ್ನು ಚುಡಾಯಿಸಿ ದಾಂಧಲೆ ನಡೆಸಿದಾತ ಮುಗ್ಗರಿಸಿ ಬಿದ್ದು ಗಾಯ!
Tuesday, May 3, 2022
ಉಪ್ಪಿನಂಗಡಿ: ಹೊಟೇಲೊಂದರಲ್ಲಿ ಊಟ ಮಾಡುತ್ತಿದ್ದ ಮಹಿಳೆಯೋರ್ವರ ಮೇಲೆ ಕೈಹಾಕಿ ಚುಡಾಯಿಸಿರುವ ದುಷ್ಕರ್ಮಿಯೋರ್ವನು ಈ ಪ್ರಶ್ನಿಸಿದ ಹೊಟೇಲ್ ಮಾಲಕ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆಗೈದು ದಾಂಧಲೆ ನಡೆಸಿರುವ ಘಟನೆ ಉಪ್ಪಿನಂಗಡಿಯಲ್ಲಿ ಸೋಮವಾರ ನಡೆದಿದೆ.
ಉಪ್ಪಿನಂಗಡಿ ಬಸ್ ನಿಲ್ದಾಣದ ಪರಿಸರದಲ್ಲಿರುವ ಹೊಟೇಲ್‌ನಲ್ಲಿ ಈ ಘಟನೆ ಸಂಭವಿಸಿದೆ. ವೇಣೂರು ನಿವಾಸಿ ಪ್ರಶಾಂತ್ ಎಂಬಾತ ದಾಂಧಲೆಗೈದಿರುವ ಆರೋಪಿ. ಈತ ನಿನ್ನೆ ಮಧ್ಯಾಹ್ನ ಹೊಟೇಲಿಗೆ ಬಂದಿದ್ದ ಆರೋಪಿ ಪ್ರಶಾಂತ್ ಊಟಕ್ಕೆ ಆರ್ಡರ್ ಕೊಟ್ಟು ಸಮೀಪದ ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಗ್ರಾಹಕಿಯನ್ನು ಚುಡಾಯಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆಯು ಹೊಟೇಲ್ ಮಾಲಕರಲ್ಲಿ ಈ ಬಗ್ಗೆ ದೂರಿಕೊಂಡಿದ್ದಾರೆ.
ಹೊಟೇಲ್ ಮಾಲಕ ಆತನನ್ನು ಹೊಟೇಲಿನಿಂದ ಹೊರ ಕಳುಹಿಸಿದ್ದಾರೆ. ಇದರಿಂದ ಕುಪಿತಗೊಂಡ ಆರೋಪಿ ಹೊಟೇಲಿಗೆ ನುಗ್ಗಿ ಹೊಟೇಲ್ ನ ಒಳಗಿದ್ದವರಿಗೆ ಸೋಡಾ ಬಾಟ್ಲಿಯನ್ನು ಎಸೆಯಲಾರಂಭಿಸಿದ್ದಾನೆ.
ಈ ವೇಳೆ ಆತ ಹೊಟೇಲ್ ನ ಕುರ್ಚಿಯನ್ನು ಎತ್ತಿ ಎಸೆಯಲೆತ್ನಿಸಿದ ವೇಳೆ ನೆಲಕ್ಕೆ ಮುಗ್ಗರಿಸಿ ಬಿದ್ದದ್ದಾನೆ. ಪರಿಣಾಮವಾಗಿ ಆತನ ಮುಖಕ್ಕೆ ಗಾಯಗಳಾಗಿವೆ. ಆ ವೇಳೆ ಸ್ಥಳೀಯರು ಆತನನ್ನು ಹಿಡಿದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಹೊಟೇಲ್ ಮಾಲಕರು ದಾಂಧಲೆ ನಡೆಸಿದ ಪ್ರಶಾಂತ್ ನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.