ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪಿ ಅರೆಸ್ಟ್
Friday, May 6, 2022
ನರಸಿಂಗಪುರ: ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತೆಯೊಬ್ಬಳನ್ನು ಅಪಹರಣ ಮಾಡಿ ಅತ್ಯಾಚಾರಗೈದು ಕೊಲೆಗೈದಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ನರಸಿಂಗಪುರ ಪಟ್ಟಣದಲ್ಲಿ ಗುರುವಾರ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮುಂದಿನ ನಡೆಸುತ್ತಿದ್ದಾರೆ. ಆರೋಪಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದು ಬಳಿಕ ಆಕೆಯ ಮೃತದೇಹವನ್ನು ಹೊಲವೊಂದರಲ್ಲಿ ಹೂತುಹಾಕಿದ್ದನು. ಆರೋಪಿ ತೋರಿಸಿರುವ ಸ್ಥಳದಲ್ಲಿ ಬಾಲಕಿಯ ಮೃತದೇಹವನ್ನು ಪೊಲೀಸರುವಪತ್ತೆಹಚ್ಚಿದ್ದಾರೆ.
ತಮ್ಮ ಪುತ್ರಿಯನ್ನು ಅಪಹರಣ ಮಾಡಿರುವ ಬಗ್ಗೆ ಆಕೆಯ ಪಾಲಕರು ಬುಧವಾರ ರಾತ್ರಿ ದೂರು ನೀಡಿದ್ದರು. ತಮ್ಮ ಕೆಲಸದಾಳುವೇ ಬಾಲಕಿಯನ್ನು ಅಪಹರಿಸಿದ್ದಾನೆಂದು ಆರೋಪಿಸಿದ್ದರು. ಈತ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಹತ್ಯೆಗೈದಿರುವುದಾಗಿ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆಂದು ಗಂಜ್ ಪೊಲೀಸ್ ಠಾಣಾಧಿಕಾರಿ ಗೌರವ್ ಚಾಥ್ ತಿಳಿಸಿದ್ದಾರೆ.