-->
ಡ್ರಗ್ಸ್ ಪ್ರಕರಣದಲ್ಲಿ ಕ್ಲಿನ್ ಚಿಟ್ ದೊರಕಿರುವ ಬೆನ್ನಲ್ಲೇ 'ನಾನಿದನ್ನು ಸೇವಿಸ್ತಿದ್ದೆ' ಎಂದು ಹೇಳಿದ ಶಾರುಖ್ ಪುತ್ರ

ಡ್ರಗ್ಸ್ ಪ್ರಕರಣದಲ್ಲಿ ಕ್ಲಿನ್ ಚಿಟ್ ದೊರಕಿರುವ ಬೆನ್ನಲ್ಲೇ 'ನಾನಿದನ್ನು ಸೇವಿಸ್ತಿದ್ದೆ' ಎಂದು ಹೇಳಿದ ಶಾರುಖ್ ಪುತ್ರ

ಮುಂಬೈ: ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್ ಪ್ರಕರಣದಲ್ಲಿ ಕ್ಲಿನ್ ಚಿಟ್ ದೊರಕಿರುವ ಬೆನ್ನಲ್ಲೇ ತಾನದನ್ನು ಸೇವಿಸುತ್ತಿದ್ದೆ ಎಂದು ಹೇಳಿದ್ದಾನೆ. 

ಕಳೆದ ಅಕ್ಟೋಬರ್​ 30ರಂದು ಕ್ರೂಸ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಸಂದರ್ಭ ಸಿಕ್ಕಿಬಿದ್ದಿರುವ ಆರ್ಯನ್ ಖಾನ್ ಜೈಲುಪಾಲಾಗಿದ್ದ. ಆ ಬಳಿಕ ಹೊರಗೆ ಬಂದರೂ ಕೇಸ್ ಮಾತ್ರ ನಡೆಯುತ್ತಿತ್ತು. ಇದೀಗ ಆರ್ಯನ್​ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್​​ಚಿಟ್​​ ನೀಡಿದ್ದಾರೆ. ಈ ಸಮಯದಲ್ಲಿ ಆರ್ಯನ್​ ಖಾನ್​ ಬಳಿ ಡ್ರಗ್ಸ್​ ಇರುವುದಕ್ಕೆ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದಿದ್ದಾರೆ. ಆರ್ಯನ್ ಖಾನ್ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಅಲ್ಲದೆ ವಶಪಡಿಸಿಕೊಂಡ ವಸ್ತುಗಳಲ್ಲಿ ಡ್ರಗ್ಸ್ ಕಂಡು ಬಂದಿಲ್ಲ ಎಂದು ಚಾರ್ಜ್​ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ 22 ದಿನಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದ್ದ ಆರ್ಯನ್​ ಖಾನ್​ ಕೊನೆಗೂ ನೆಮ್ಮದಿಯಿಂದ ಉಸಿರುಬಿಡುವಂತಾಗಿದೆ. 

ಈ ನಡುವೆ, ವಿಚಾರಣೆಯ ವೇಳೆ ಆರ್ಯನ್​ ಖಾನ್​ ತಾನು ಡ್ರಗ್ಸ್​ ಸೇವನೆ ಮಾಡುತ್ತಿದ್ದುದು ನಿಜವೆಂದು ಒಪ್ಪಿಕೊಂಡಿದ್ದಾನೆ. ಅಮೆರಿಕಾದಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಸಂದರ್ಭ ತಾನು ಗಾಂಜಾ ಸೇವಿಸುತ್ತಿದ್ದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂದೆ ಹೇಳಿಕೆ ನೀಡಿದ್ದಾರೆ. ತನಗೆ ಆ ವೇಳೆ ನಿದ್ದೆ ಬರುತ್ತಿರಲಿಲ್ಲ. ಹಾಗಾಗಿ ಇಂಟರ್​ನೆಟ್​ನಲ್ಲಿ ಈ ಬಗ್ಗೆ ಹುಡುಕಾಡಿದಾಗ ಗಾಂಜಾ ಸೇವನೆ ಮಾಡಬೇಕೆಂಬ ಮಾಹಿತಿ ದೊರಕಿತ್ತು. ಅದಕ್ಕಾಗಿ ತಾನು ಗಾಂಜಾ ಸೇವಿಸುತ್ತಿದ್ದೆ ಎಂದು ಹೇಳಿದ್ದಾನೆ. ಆರ್ಯನ್ ಖಾನ್​ ತನ್ನ ಸ್ನೇಹಿತೆ ಅನನ್ಯ ಪಾಂಡೆಯೊಂದಿಗೆ ಪಾರ್ಟಿಗೂ ಮೊದಲು ಕೊಕೇನ್ ಪ್ಲ್ಯಾನ್​ ಮಾಡಿದ್ದ ವಾಟ್ಸ್ಆ್ಯಪ್​ ಸಂದೇಶ ದೊರಕಿತ್ತು. ಇದರಲ್ಲಿ ಗಾಂಜಾ ಬಗ್ಗೆಯೂ ಉಲ್ಲೇಖವಿತ್ತು. ಇದಕ್ಕೆ ಉತ್ತರಿಸಿರುವ ಆರ್ಯನ್​, 'ಈ ಮೆಸೇಜ್​ ಮಾಡಿದ್ದು ತಾನೇ. ಆದರೆ ಇದೆಲ್ಲಾ ತಮಾಷೆಗೆ ಮಾಡಿರುವ ಮೆಸೇಜ್​ಗಳಷ್ಟೇ. ನಾವೇನೂ ಪಾರ್ಟಿಯಲ್ಲಿ ಡ್ರಗ್ಸ್​ ಸೇವನೆ ಮಾಡುತ್ತಿರಲಿಲ್ಲ' ಎಂದಿದ್ದಾನೆ. 

ಮುಂಬೈನಿಂದ ಒಬ್ಬ ಡೀಲರ್​ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದ ಬಗ್ಗೆ ಈ ಹಿಂದೆ ಆರ್ಯನ್​ ಬಾಯಿಬಿಟ್ಟಿದ್ದ. 'ಡ್ರಗ್ಸ್​ ಪೂರೈಕೆ ಮಾಡುತ್ತಿದ್ದುದು ಸತ್ಯ. ಆದರೆ ಆತನ ಹೆಸರು ಮತ್ತು ಮಾಹಿತಿ ತನಗಿಲ್ಲ' ಎಂದು ತಿಳಿಸಿದ್ದಾನೆ. ಅದೇನೇ ಆದರೂ ಅಧಿಕಾರಿಗಳು ಇದೀಗ ಕ್ಲೀನ್​ಚಿಟ್​ ಕೊಟ್ಟಿದ್ದರಿಂದ ಶಾರುಖ್​ ಪುತ್ರ ನೆಮ್ಮದಿಯಿಂದ ಇದ್ದಾನೆ.

Ads on article

Advertise in articles 1

advertising articles 2

Advertise under the article