ಯುವಕನ ಕೈಗೆ ಮಗು ನೀಡಿ ಪರಾರಿಯಾಗಿದ್ದ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಖತರ್ನಾಕ್ ಪ್ರೇಮಿಗಳು ಮದುವೆಗೆ ಅಡ್ಡಿಯಾದ ಮಗುವನ್ನು ಅನಾಥವೆಂದು ಬಿಂಬಿಸಿದ್ದರು
Tuesday, May 24, 2022
ಮೈಸೂರು: ಎರಡು ವಾರಗಳ ಹಿಂದೆ ರಾಯಚೂರು ಬಸ್ ತಂಗುದಾಣದಲ್ಲಿ ಅಪರಿಚಿತ ಮಹಿಳೆಯೋರ್ವಳು 9 ತಿಂಗಳ ಹಸುಗೂಸೊಂದನ್ನು ಯುವಕನ ಕೈಗೆ ನೀಡಿ ನಾಪತ್ತೆಯಾಗಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಘಟನೆ ನಡೆದಿತ್ತು.
ಅಪರಿಚಿತ ಮಹಿಳೆಯೋರ್ವಳು ಮೈಸೂರಿನ ಹೆಚ್.ಡಿ.ಕೋಟೆ ನಿವಾಸಿ ರಘು ಎಂಬಾತನ ಕೈಗೆ ಹಸುಗೂಸನ್ನು ನೀಡಿ ನಾಪತ್ತೆಯಾಗಿದ್ದಳು. ಆ ಬಳಿಕ ಆತ ಆ ಮಗುವನ್ನು ಪೊಲೀಸರ ಕೈಗೆ ಒಪ್ಪಿಸಿದ್ದ. ಆದರೆ ಪೊಲೀಸ್ ತನಿಖೆಯಲ್ಲಿ ಸತ್ಯ ಬಹಿರಂಗವಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ದೊರಕಿದೆ.
ಈ ಪ್ರಕರಣ ಭೇದಿಸಿರುವ ಲಷ್ಕರ್ ಠಾಣಾ ಪೊಲೀಸರು ಸತ್ಯ ಬಯಲು ಮಾಡಿದ್ದಾರೆ. ಈ ಖತರ್ನಾಕ್ ಪ್ರೇಮಿಗಳು ತಮ್ಮ ಪ್ರೀತಿ - ಪ್ರಣಯದ ಕಳ್ಳಾಟಕ್ಕೆ ಮಗು ಅಡ್ಡಿಯಾಗಿದೆಯೆಂದು ಇಂತಹ ಭಯಾನಕ ಪ್ಲ್ಯಾನ್ ಮಾಡಿದ್ದಾರೆ. ಎರಡು ವಾರಗಳ ಹಿಂದೆ ಮಹಿಳೆಯೋರ್ವಳು ತನ್ನ ಕೈಗೆ ಮಗುವೊಂದನ್ನು ಕೊಟ್ಟು ಮತ್ತೆ ವಾಪಸ್ ಬರಲಿಲ್ಲ. ಆದ್ದರಿಂದ ತಾನು ಮಗುವನ್ನು ಮೈಸೂರಿಗೆ ತಂದಿದ್ದೇನೆ ಎಂದು ಪೊಲೀಸರ ಮುಂದೆ ಕಥೆ ಕಟ್ಟಿದ್ದ. ಆದರೆ ರಘು ತಾನು ಪ್ರೀತಿಸಿರುವ ಮಹಿಳೆಯನ್ನು ಮದುವೆವಾಗಲು ಈ ಮಗು ಅಡ್ಡ ಬರುತ್ತಿದೆ ಎಂದು ತನ್ನ ಪ್ರೇಯಸಿಯ ಮಗುವನ್ನೇ ಅನಾಥ ಮಗುವೆಂದು ಬಿಂಬಿಸಿದ್ದಾನೆ.
ಸದ್ಯ ಪ್ರಕರಣ ಭೇದಿಸಿರುವ ಪೊಲೀಸರು ಕಳ್ಳ ಪ್ರೇಮಿಗಳ ಆಟ ಬಯಲು ಮಾಡಿದ್ದಾರೆ. ಮಗುವಿನ ಪರಿಸ್ಥಿತಿಗೆ ಮರುಗಿ ತಾಯಿಯನ್ನು ಪತ್ತೆ ಮಾಡಿದ ಪೊಲೀಸರಿಗೆ ಮಹಿಳೆಯಿಂದಲೇ ಸ್ಪೋಟಕ ಮಾಹಿತಿ ದೊರಕಿದೆ. ರಘು ಹಾಗೂ ಮಹಿಳೆ ನಡುವೆ ಪ್ರೀತಿ ಇತ್ತು. ಇಬ್ಬರ ಪ್ರೀತಿಗೆ ತನ್ನ ಮಗು ಅಡ್ಡಿಯಾಗಿತ್ತು. ಅದಕ್ಕಾಗಿ ಮಗುವನ್ನು ದೂರ ಮಾಡಲು ಇವರಿಬ್ಬರೂ ಸೇರಿ ಈ ರೀತಿಯ ಖತರ್ನಾಕ್ ಪ್ಲ್ಯಾನ್ ಮಾಡಿ ನಾಟಕ ಆಡಿದ್ದಾರೆ.
ಮೂಲತಃ ರಾಯಚೂರಿನವಳಾದ ವಿವಾಹಿತ ಮಹಿಳೆಯನ್ನು ರಘು ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯ ಮಾಡಿಕೊಂಡಿದ್ದ. ಕಳೆದ ಒಂದೂವರೆ ವರ್ಷದಿಂದ ಇವಬ್ಬರ ನಡುವೆ ಪ್ರೀತಿಯಿತ್ತು. ಆದರೆ ಈ ವಿವಾಹಿತೆಗೆ ಗಂಡು ಮಗು ಇದ್ದು, ಪತಿಯಿಂದ ದೂರವಾಗಿದ್ದಳು. ಆದ್ದರಿಂದ ಆಕೆಯು ಮಗುವನ್ನು ದೂರ ಮಾಡಿಕೊಂಡು ರಘು ಜೊತೆ ಮದುವೆಯಾಗಲು ಪ್ಲ್ಯಾನ್ ಮಾಡಿದ್ದಳು. ಹೀಗಾಗಿ ಇವರಿಬ್ಬರೂ ಸೇರಿ ಇಂತಹ ಡ್ರಾಮಾ ಮಾಡಿದ್ದರು. ಸದ್ಯ ರಘು ಹಾಗೂ ವಿವಾಹಿತ ಮಹಿಳೆಯ ವಿರುದ್ಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುನರ್ವಸತಿ ಕೇಂದ್ರದಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ.