ಮಂಗಳೂರು: ದನಗಳವುಗೈದು ಮಾಂಸ ಮಾರಾಟ ಮಾಡಿದ ನಾಲ್ವರು ಗೋಕಳ್ಳರು ಅರೆಸ್ಟ್
Monday, May 2, 2022
ಮಂಗಳೂರು: ದನಗಳವುಗೈದು ಮಾಂಸ ಮಾಡಿ ಮಾರಾಟ ಮಾಡಿರುವ ನಾಲ್ವರು ಗೋಕಳ್ಳರನ್ನು ಪಣಂಬೂರು ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ತೋಕೂರು ಗ್ರಾಮದ ಜೋಕಟ್ಟೆ ನಿವಾಸಿಗಳಾದ ಮಹಮ್ಮದ್ ಇಸ್ಮಾಯಿಲ್ ಅಲಿಯಾಸ್ ಇಚ್ಚ ಜೋಕಟ್ಟೆ, ಸಮೀರ್ ಜೋಕಟ್ಟೆ, ದಾವೂದ್ ಹಕೀಂ, ಮಹಮ್ಮದ್ ಇಲ್ಯಾಸ್ ಬಂಧಿತ ಆರೋಪಿಗಳು.
ನಗರದ ತೋಕೂರು ನಿವಾಸಿ ಮಹಾಬಲ ಪೂಜಾರಿ ಎಂಬವರ ಮನೆಯ ಹಟ್ಟಿಯಿಂದ ಎ.25ರಂದು ದನಗಳವು ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪಣಂಬೂರು ಪೊಲೀಸರು ತನಿಖೆ ನಡೆಸುತ್ತಿದ್ದಾಗ ಅವರ ನೆರೆಮನೆಯ ನಿವಾಸಿ ದಾವೂದ್ ಎಂಬಾತನೇ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿ ದನಗಳನ್ನು ಹಟ್ಟಿಯಿಂದಲೇ ಕಳವುಗೈದಿದ್ದನೆಂಬ ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ನಾಲ್ವರು ಆರೋಪಿಗಳಿಂದ 3ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರು, ದನಗಳನ್ನು ಕಡಿದು ಮಾಂಸ ಮಾಡಲು ಬಳಸಿರುವ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.