ಮಂಗಳೂರು: ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕ ಮನೆ ಮೇಲಿನಿಂದ ಬಿದ್ದು ಮೃತ್ಯು
Thursday, May 12, 2022
ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರೋರ್ವರು ಮನೆಯ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಇಂದು ಮಂಗಳೂರಿನ ಹೊರವಲಯದಲ್ಲಿರುವ ವಾಮಂಜೂರಿನ ದೇವರಪದವು ಎಂಬಲ್ಲಿ ನಡೆದಿದೆ.
ನಗರದ ಮೂಡುಶೆಡ್ಡೆ ನಿವಾಸಿ ಹರಿಶ್ಚಂದ್ರ (50) ಮೃತಪಟ್ಟ ಕಾರ್ಮಿಕ.
ವಾಮಂಜೂರಿನ ದೇವರಪದವು ಎಂಬಲ್ಲಿನ ಜೆಸಿಂತಾ ರೇಗೊ ಅವರ ಮನೆಯಲ್ಲಿ ಹರಿಶ್ಚಂದ್ರ ಅವರು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಇಂದು ತೊಡಗಿದ್ದರು. ಆದರೆ ಕೆಲಸ ಮಾಡುತ್ತಿದ್ದ ಸಂದರ್ಭ ಮನೆಯ ಮಹಡಿ ಮೇಲಿದ್ದ ಅವರು ಏಕಾಏಕಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಅವರ ಪುತ್ರ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಂಟ್ರಾಕ್ಟರ್ ವೀರಪ್ಪ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.