ಶಿವಮೊಗ್ಗದಲ್ಲಿ ನಾಲ್ವರು ಮಕ್ಕಳನ್ನು ಹೆತ್ತಳು ಮಹಾತಾಯಿ
Monday, May 23, 2022
ಶಿವಮೊಗ್ಗ: ಅವಳಿ - ಜವಳಿ ಮಕ್ಕಳು ಜನಿಸೋದನ್ನು ನಾವು ಎಲ್ಲೆಡೆ ನೋಡುತ್ತಿರುತ್ತೇವೆ. ಆದರೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಮಹಿಳೆಯರು ಬರೋಬ್ಬರಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಭದ್ರಾವತಿ ತಾಲೂಕಿನ ಕಡಸ ಗ್ರಾಮ ನಿವಾಸಿ ಆರೀಫ್ ಎಂಬವರ ಪತ್ನಿ ಅಲ್ಮಾ ಬಾನು ನಾಲ್ವರು ಶಿಶುಗಳಿಗೆ ಜನ್ಮ ನೀಡಿರುವ ಮಹಾತಾಯಿ.
ಈಕೆಗೆ ಎರಡು ಗಂಡು, ಎರಡು ಹೆಣ್ಣು ಶಿಶುಗಳು ಜನಿಸಿವೆ. ಸೋಮವಾರ ಬೆಳಗ್ಗೆ ಅಲ್ಮಾ ಬಾನು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.