ಇಂಗ್ಲೀಷ್ ನಲ್ಲಿ ಮಾತನಾಡಿರುವುದಕ್ಕೆ ಮಾಜಿ ಲೆಫ್ಟಿನೆಂಟ್ ಮೊಮ್ಮಗನ ಮೇಲೆ ನಾಯಿ ದಾಳಿ ನಡೆಸಿದ ದುಷ್ಕರ್ಮಿ!
Tuesday, May 10, 2022
ಡೆಹ್ರಾಡೂನ್(ದೆಹಲಿ): ಇಂಗ್ಲಿಷ್ನಲ್ಲಿ ಮಾತನಾಡಿದನೆಂಬ ಕಾರಣಕ್ಕೆ ನೇಪಾಳಿಗ ಎಂದು ಯುವಕನೋರ್ವನ ಮೇಲೆ ನಾಯಿ ಛೂ ಬಿಟ್ಟು ಗಾಯಗೊಳಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಅದೂ 4 ಬಾರಿ ನಾಯಿಯಿಂದ ದಾಳಿ ನಡೆಸಿ ಕಚ್ಚಿಸಲಾಗಿದೆ ಎಂದು ಗಾಯಾಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೆಹಲಿಯ ಡೆಹ್ರಾಡೂನ್ ನಿವಾಸಿ, ಮಾಜಿ ಲೆಫ್ಟಿನೆಂಟ್ ಸಿ.ವಿ. ಬಹದ್ದೂರ್ ಅವರ ಮೊಮ್ಮಗ ಅಂಶುಮಾನ್ ಥಾಪಾ ದಾಳಿಗೆ ಒಳಗಾದ ಯುವಕ. ಅಂಶುಮಾನ್ ಥಾಪಾ ಅಂಗಡಿಗೆ ಹೋದ ಸಂದರ್ಭ ಇಂಗ್ಲಿಷ್ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದಿರುವ ಕೈಫ್ ಎಂಬಾತ 'ನೀನು ನೇಪಾಳಿಯ' ಎಂದು ಪ್ರಶ್ನಿಸಿದ್ದಾರೆ. ಅಲ್ಲ ಎಂದು ಅಂಶುಮಾನ್ ಥಾಪಾ ಹೇಳಿದ್ದಾರೆ. ಆದರೆ ಆತ ಇದಾವುದನ್ನು ಕೇಳದೆ ಜಗಳ ತೆಗೆದು ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಕೈಫ್ನ ನಾಯಿ ಅಂಶುಮಾನ್ ಥಾಪಾ ಮೇಲೆ ದಾಳಿ ಮಾಡಿದೆ. ಇದನ್ನು ತಡೆಯದ ಕೈಫ್ ಕಚ್ಚಲು ಪ್ರೇರೇಪಿಸಿದ್ದಾನೆ. ನಾಯಿಯ ದಾಳಿಯಿಂದ ಗಾಯಗೊಂಡ ಅಂಶುಮಾನ್ ಥಾಪಾ ತಪ್ಪಿಸಿಕೊಂಡು ಅಂಗಡಿಯೊಳಕ್ಕೆ ಓಡಿ ಹೋಗಿದ್ದಾನೆ. ಆದರೂ ಬಿಡದ ಕೈಫ್ ಆತನ ನಾಯಿಯ ಮೇಲೆ ಪದೇ ಪದೇ ದಾಳಿ ಮಾಡಿಸಿ ಕಚ್ಚಿಸಿದ್ದಾನೆ.
ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಮನೆಗೆ ವಾಪಸಾದ ಬಳಿಕ ಅಂಶುಮಾನ್ ಥಾಪಾ ಸ್ಥಿತಿಯನ್ನು ನೋಡಿದ ಸ್ನೇಹಿತರು ಗಾಬರಿಯಾಗಿದ್ದಾರೆ. ಬಳಿಕ ನಡೆದ ಘಟನೆಯ ಬಗ್ಗೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಣ್ಮರೆಯಾಗಿರುವ ನಾಯಿ ದಾಳಿಕೋರ ಕೈಫ್ನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.