ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ ಪರೀಕ್ಷಾ ಕೇಂದ್ರದಿಂದಲೇ ಪ್ರಿಯತಮನೊಂದಿಗೆ ಪರಾರಿ
Monday, May 9, 2022
ಚಾಮರಾಜನಗರ: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಬರೆದು ಮುಗಿಸಿರುವ ವಿದ್ಯಾರ್ಥಿನಿಯೋರ್ವಳು ತನ್ನ ಪ್ರಿಯತಮನೊಂದಿಗೆ ಪರಾರಿಯಾಗಿರುವ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಕೊಳ್ಳೇಗಾಲ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮ ನಿವಾಸಿ ವಿದ್ಯಾರ್ಥಿನಿ ನಾಪತ್ತೆಯಾದವಳು. ಈಕೆ ಕೊಳ್ಳೆಗಾಲ ಪಟ್ಟಣದ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಅಂತಿಮ ವಿಷಯದ ಪರೀಕ್ಷೆ ಬರೆದಿದ್ದಳು. ಆದರೆ ಆ ಬಳಿಕ ಜೊತೆಯಲ್ಲಿದ್ದ ತಾಯಿಯ ಕಣ್ತಪ್ಪಿಸಿ ಅದೇ ಗ್ರಾಮದ ಯುವಕ ನಾಗರಾಜ ಎಂಬಾತನೊಟ್ಟಿಗೆ ಪರಾರಿಯಾಗಿದ್ದಾಳೆ. ಓಡುತ್ತಿದ್ದ ಪುತ್ರಿಯನ್ನು ಕಂಡು 'ಎಲ್ಲಿಗೆ ಹೋಗ್ತಿದಿಯಾ ಮಗಳೇ' ಎಂದು ತಾಯಿ ಕೇಳುವಷ್ಟರಲ್ಲಿ ಯುವಕ ಬಂದಿದ್ದ ಕಾರಿನಲ್ಲಿ ಆಕೆ ಪರಾರಿಯಾಗಿದ್ದಾಳೆ.
ಇದರಿಂದ ತಾಯಿ ಕಂಗಾಲಾಗಿ ಅದೇ ಗ್ರಾಮದ ನಾಗರಾಜು ಎಂಬ ಯುವಕನ ವಿರುದ್ಧ ಕೊಳ್ಳೇಗಾಲ ಪಟ್ಟಣ ಠಾಣೆಗೆ ವಿದ್ಯಾರ್ಥಿನಿಯ ತಾಯಿ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.