-->
ಸಾವಿರಾರು ಮಹಿಳೆಯರಿಗೆ ಪಂಗನಾಮ ಹಾಕಿದ್ದ ಖತರ್ನಾಕ್ ಖದೀಮ ಪೊಲೀಸ್ ವಶಕ್ಕೆ

ಸಾವಿರಾರು ಮಹಿಳೆಯರಿಗೆ ಪಂಗನಾಮ ಹಾಕಿದ್ದ ಖತರ್ನಾಕ್ ಖದೀಮ ಪೊಲೀಸ್ ವಶಕ್ಕೆ

ಹೈದರಾಬಾದ್​: ಕಳೆದ 10 ವರ್ಷಗಳಲ್ಲಿ ಸಾವಿರಾರು ಮಹಿಳೆಯರಿಗೆ ಸುಮಾರು 10 ಕೋಟಿ ರೂ.ನಷ್ಟು ವಂಚನೆ ಮಾಡಿರುವ ಆರೋಪದಲ್ಲಿ ಯುವಕನೋರ್ವನನ್ನು ಸೈಬರಾಬಾದ್​​ ಪೊಲೀಸರು ಎರಡು ತಿಂಗಳ ಕಾರ್ಯಾಚರಣೆ ನಡೆಸಿ‌ ಬಂಧಿಸಿದ್ದಾರೆ‌.

ತೆಲಂಗಾಣದ ರಾಜಧಾನಿ ಹೈದರಾಬಾದ್​ನಲ್ಲಿ ಈ ವಂಚನೆ ಪ್ರಕರಣ ಬಯಲಿಗೆ ಬಂದಿದೆ. ಯುವತಿಯರು, ವಿಧವೆಯರು ಸೇರಿದಂತೆ ಸಾವಿರಾರು ಮಹಿಳೆಯರಿಗೆ ಈತ ವಂಚನೆಗೈದಿದ್ದಾನೆ ಎಂಬ ಆರೋಪ‌ ಕೇಳಿಬಂದಿದೆ. 

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರರಾವ್​​ ಪೇಟಾ ಮೂಲದ ವಂಶಿಕೃಷ್ಣ 2014ರಲ್ಲಿ ಬಿಟೆಕ್​ ಮುಗಿಸಿ ಹೈದರಾಬಾದ್​ಗೆ ಬಂದಿದ್ದನು. ಇಲ್ಲಿ ಉದ್ಯೋಗ ಪಡೆದುಕೊಂಡ ಆತ ಕುದರೆ ರೇಸಿಂಗ್, ಕ್ರಿಕೆಟ್​ ಬೆಟ್ಟಿಂಗ್​​​ನಲ್ಲಿ ಭಾಗಿಯಾಗಿ ಹಣ ಸೋತು ವಿಪರೀತ ಸಾಲ ಮಾಡಿಕೊಂಡಿದ್ದ. ಈ ಸಾಲದ ಹೊರೆಯಿಂದ ಹೊರ ಬರಲು ಆತ ವಂಚನೆ ಮಾಡಲು ತೊಡಗಿದ್ದಾನೆ ಎನ್ನಲಾಗಿದೆ. 

ಈತ ಯುವತಿಯರು, ವಿಧವೆಯರು, ವಿದೇಶದಲ್ಲಿರುವ ಪುರುಷರ ಪತ್ನಿಯರಿಗೆ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಈತ ಕುಕಟ್​ಪಲ್ಲಿ ವೈಬ್ಸ್ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುದುರೆ ರೇಸಿಂಗ್, ಕ್ರಿಕೆಟ್​ ಬೆಟ್ಟಿಂಗ್​​ನಲ್ಲಿ ಭಾಗಿಯಾಗಿದ್ದಾನೆ. ಇದಕ್ಕೂ ಮೊದಲು ಟ್ರಾವೆಲ್​ ಕನ್ಸಲ್ಟೆನ್ಸಿ ಕಚೇರಿಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದು, ಕೆಲಸ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ, ಹಣ ಪಡೆದುಕೊಂಡಿದ್ದಾನೆ. ಈ ವೇಳೆ ಬಂಧನಕ್ಕೊಳಗಾಗಿದ್ದ ಆತ, ಜಾಮೀನು ಮೇಲೆ ಹೊರಬಂದಿದ್ದನು.

ಜೈಲಿನಿಂದ ಹೊರಬಂದ ಬಳಿಕ ಗಾಯತ್ರಿ, ಮಾಧುರಿ, ಸ್ವಾತಿಕಾ, ಶ್ವೇತಾ ಮುಂತಾದ ಯುವತಿಯರ ಹೆಸರಿನಲ್ಲಿ ಇನ್​​​​ಸ್ಟಾಗ್ರಾಂ ಖಾತೆ ತೆರೆದಿದ್ದಾನೆ. ಅಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಮಹಿಳೆಯರಿಗೆ ವಂಚಿಸಲು ಶುರು ಮಾಡಿದ್ದಾನೆ. ಇದರ ಜೊತೆಗೆ ಶಾಸಕ ಶ್ರೀನಿವಾಸ್ ಅಶೋಕ್​ ರ ಫೋಟೋಗಳೊಂದಿಗೆ ನಕಲಿ ಇನ್​​ಸ್ಟಾಗ್ರಾಂ ಖಾತೆ ತೆರೆದಿದ್ದಾನೆ. ಅಲ್ಲದೆ ಅನೇಕ ಯುವತಿಯರ ವಿಶ್ವಾಸಗಳಿಸಿ, ಅವರ ಅಕೌಂಟ್​​ನಿಂದ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿಕೊಂಡು ಕುದುರೆ ಬೆಟ್ಟಿಂಗ್​​ಗೋಸ್ಕರ ಬಳಕೆ ಮಾಡಿಕೊಂಡಿದ್ದಾನೆ.

ಆನ್​ಲೈನ್​ ಮದುವೆ ಸೈಟ್​​ಗಳ ಮೂಲಕ ವಿಧವೆಯರು, ವಿಚ್ಛೇದಿತ ಮಹಿಳೆಯರಿಂದ ದೊಡ್ಡ ದೊಡ್ಡ ಮೊತ್ತದ ಹಣ ವಸೂಲಿ ಮಾಡಿದ್ದಾನೆ. 2016ರಿಂದ ಇಲ್ಲಿಯವರೆಗೆ ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಪಂಗನಾಮ ಹಾಕಿದ್ದಾನೆ. ಮೋಸಕ್ಕೊಳಗಾದ ಕೇವಲ 50-60 ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೆ 30 ಮಹಿಳೆಯರನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article