ರೌಡಿ ಇಲ್ಯಾಸ್ ಹತ್ಯೆ ಮಾಡಿದ್ದ ಖತರ್ನಾಕ್ ರೌಡಿ ಇಲ್ಯಾಸ್ ಬಂಧನ
ರೌಡಿ ಇಲ್ಯಾಸ್ ಹತ್ಯೆ ಮಾಡಿದ್ದ ಖತರ್ನಾಕ್ ರೌಡಿ ಇಲ್ಯಾಸ್ ಬಂಧನ
ಉಳ್ಳಾಲದ ರೌಡಿಶೀಟರ್ ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಳ್ಳಾಲ ಕಡಪ್ಪುರ ನಿವಾಸಿ ನಟೋರಿಯಸ್ ಕ್ರಿಮಿನಲ್ ಸಮೀರ್ (28) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
13-01-2018ರಂದು ಮಂಗಳೂರಿನ ಜೆಪ್ಪು ಕುಡ್ಪಾಡಿಯಲ್ಲಿ ಹಲವು ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್ ಇಲ್ಯಾಸ್ ನನ್ನು ಆತನ ಫ್ಲಾಟ್ ನಲ್ಲೇ ಹತ್ಯೆ ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರೋಪಿಗಳಾದ ದಾವುದ್, ರಿಯಾಝ್ ,ನಾಸಿರ್ ಎಂಬವರನ್ನು ಆ ದಿನವೇ ಬಂಧಿಸಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಸಮೀರ್ ತಲೆಮರೆಸಿಕೊಂಡಿದ್ದ.
ಸುಮಾರು ಎರಡು ತಿಂಗಳ ಹಿಂದೆ 'ಉಳ್ಳಾಲ ಉರೂಸ್' ಸಂದರ್ಭ ಆತನನ್ನು ಉಳ್ಳಾಲ ಪೊಲೀಸರು ಹಿಡಿಯಲು ಯತ್ನಿಸಿದ್ದರೂ ಕಾರ್ಯಾಚರಣೆ ಸಫಲವಾಗಿರಲಿಲ್ಲ.
ಇದೀಗ ಆರೋಪಿ ಸಮೀರ್ ಪಂಪುವೆಲ್ ಮೂಲಕ ಬೆಂಗಳೂರಿಗೆ ತೆರಳುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಅವರ ನಿರ್ದೇಶನದಂತೆ ಎಸ್.ಐ ಪ್ರದೀಪ್ ಹಾಗೂ ಸಿಬ್ಬಂದಿಯಾದ ರಂಜಿತ್, ಚಿದಾನಂದ್, ಹಾಗೂ ಸತೀಶ್ ಆರೋಪಿಯನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.