ಹೊಸ ಉದ್ಯೋಗ: ಇನ್‌ಫೋಸಿಸ್, ಟಿಸಿಎಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಕುಸಿತ!
Tuesday, May 3, 2022
ಹೊಸ ಉದ್ಯೋಗ: ಇನ್‌ಫೋಸಿಸ್, ಟಿಸಿಎಸ್ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಕುಸಿತ!
ಪ್ರತಿ ವರ್ಷದಂತೆ, ದೇಶದ ಪ್ರಸಿದ್ಧ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಿಸಿಎಸ್ ಮತ್ತು ಇನ್ಫೋಸಿಸ್ ಬೃಹತ್ ಪ್ರಮಾಣದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಆದರೆ, ಈ ಬಾರಿ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ.
ಐಟಿ ದಿಗ್ಗಜ ಇನ್ಫೋಸಿಸ್ ಈ ಆರ್ಥಿಕ ವರ್ಷದಲ್ಲಿ 50 ಸಾವಿರ ಸಿಬ್ಬಂದಿ ನೇಮಕಾತಿ ಯೋಜನೆಯನ್ನು ಹಾಕಿಕೊಂಡಿದೆ. ಇದೇ ವೇಳೆ ಟಿಸಿಎಸ್ 40,000 ಸಿಬ್ಬಂದಿ ನೇಮಕಾತಿಯ ಯೋಜನೆ ಇಟ್ಟುಕೊಂಡಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಟಿಸಿಎಸ್ 1,00,000 ಹೊಸಬರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿತ್ತು. ಇನ್ಫೋಸಿಸ್ 85,000 ಫ್ರೆಶರ್ ಗಳಿಗೆ ಮಣೆ ಹಾಕಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ನೇಮಕಾತಿ ಪ್ರಮಾಣದಲ್ಲಿ ಭಾರೀ ಕುಸಿತ ಉಂಟಾಗಿದೆ ಎನ್ನಲಾಗಿದೆ. ಎರಡು ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಮುಂದುವರೆಯಲಿದೆ.